ಅಕ್ರಮ ಮರಳು ಸಾಗಾಟ: ಟಿಪ್ಪರ್ ವಶ

Update: 2023-10-26 14:37 GMT

ಸಾಂದರ್ಭಿಕ ಚಿತ್ರ

ಪಡುಬಿದ್ರಿ, ಅ.26: ಅಕ್ರಮವಾಗಿ ಮರಳು ಸಾಗಿಸಲು ಯತ್ನಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಪಡುಬಿದ್ರಿ ಪೊಲೀಸರು ಅ.25ರಂದು ವಶಪಡಿಸಿಕೊಂಡಿದ್ದಾರೆ.

ರೋಹಿತ್ ಮತ್ತು ಯಶಸ್ ಎಂಬವರು ಸಾರ್ವಜನಿಕ ಜಾಗದಿಂದ ಅಕ್ರಮವಾಗಿ ಮರಳನ್ನು ಕಳವು ಮಾಡಿರುವುದು ಕಂಡು ಬಂದಿದ್ದು, 3,000 ರೂ. ಮೌಲ್ಯದ ಮುಕ್ಕಾಲು ಯೂನಿಟ್ ಮರಳು ತುಂಬಿದ ಟಿಪ್ಪರ್ ಲಾರಿ ಹಾಗೂ ಸಲಕರಣೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News