ಅಕ್ರಮ ವಾಹನ ಜಪ್ತಿ ಪ್ರಕರಣ: ಬ್ಯಾಂಕ್ ವಿರುದ್ಧ ಉಡುಪಿ ಜಿಲ್ಲಾ ಗ್ರಾಹಕ ನ್ಯಾಯಾಲಯ ಆದೇಶ

Update: 2023-11-22 15:32 GMT

ಉಡುಪಿ: ಕಾನೂನಿಗೆ ವಿರುದ್ಧವಾಗಿ ಹಾಗೂ ಯಾವುದೇ ಸಾಲ ವಸೂಲಾತಿಯ ನಿಯಮಗಳನ್ನು ಪಾಲಿಸದೆ ಅಕ್ರಮವಾಗಿ ವಾಹನ ಜಪ್ತಿ ಮಾಡಿರುವ ಕ್ರಮದ ವಿರುದ್ಧ ಉಡುಪಿ ಜಿಲ್ಲಾ ಗ್ರಾಹಕ ನ್ಯಾಯಾಲಯವು ನ.6ರಂದು ಮಧ್ಯಂತರ ಆದೇಶ ಜಾರಿಗೊಳಿಸಿ ದೂರುದಾರ ನ್ಯಾಯವಾದಿ ಪ್ರೇಮ್ ಪ್ರಸಾದ್ ಶೆಟ್ಟಿ ಅವರ ವಾಹನವನ್ನು ತಕ್ಷಣವೇ ಅವರಿಗೆ ಹಿಂದಿರುಗಿಸುವಂತೆ ನಿರ್ದೇಶಿಸಿದೆ.

ದೂರುದಾರರಾದ ಪ್ರೇಮ್ ಪ್ರಸಾದ್ ಶೆಟ್ಟಿ, ಭಾರತ್ ಬ್ಯಾಂಕ್‌ನಲ್ಲಿ ಟೊಯೊಟಾ ಇನ್ನೋವಾ ಖರೀದಿಗೆ ವಾಹನ ಸಾಲ ಪಡೆದಿದ್ದು, ಸರಿಯಾದ ಬಾಕಿ ಸಾಲದ ಮೊತ್ತವನ್ನು ಅವರಿಗೆ ತಿಳಿಸದೇ, ಕಾನೂನಾತ್ಮಕ ಯಾವುದೇ ಪೂರ್ವ ನೋಟಿಸ್ ನೀಡದೆ, ಜು.18ರಂದು ಅವರ ವಾಹನವನ್ನು ಅಕ್ರಮವಾಗಿ ವಾಹನ ಜಪ್ತಿ ಮಾಡಿದ್ದರು ಎಂದು ದೂರಲಾಗಿತ್ತು.

ಇದರ ವಿರುದ್ಧ ದೂರುದಾರರು ಈಗಾಗಲೇ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ನಂತರ ಉಡುಪಿ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು, ಬ್ಯಾಂಕ್‌ನ ಜಪ್ತಿ ಕ್ರಮವು ಸಂಪೂರ್ಣ ಅಕ್ರಮವಾಗಿ ಕಂಡು ಬಂದ ಕಾರಣ, ದೂರುದಾರರ ವಾದವನ್ನು ಪುರಸ್ಕರಿಸಿ ತಕ್ಷಣವೇ ಅವರಿಗೆ ವಾಹನ ಹಿಂದಿರುಗಿಸುವಂತೆ ಮಧ್ಯಂತರ ಆದೇಶ ಹೊರಡಿಸಿದೆ. ದೂರುದಾರರು ತಮ್ಮ ವಾದವನ್ನು ಸ್ವತಃ ನ್ಯಾಯಾಲಯದಲ್ಲಿ ಮಂಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News