ಉಡುಪಿ ಜಿಲ್ಲೆಯ ಅಲ್ಲಲ್ಲಿ ಸ್ವಾತಂತ್ರ್ಯ ದಿನಾಚರಣೆ

Update: 2024-08-15 12:32 GMT

 ಉಡುಪಿ: ಉಡುಪಿ ಜಿಲ್ಲೆಯ ಅಲ್ಲಲ್ಲಿ ಇಂದು ಸ್ವಾತಂತ್ರೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕುಂಜಾಲು ಮಸೀದಿ: ಕುಂಜಾಲು ನೂರು ಜುಮ್ಮಾ ಮಸೀದಿಯಲ್ಲಿ 78ನೇ ಸ್ವಾತಂತ್ರ ದಿನವನ್ನು ಆಚರಿಸಲಾಯಿತು.

ಮಸೀದಿಯ ಇಮಾಮ್ ಸಾದಿಕ್ ಹನೀಫಿ ಧ್ವಜಾರೋಹಣ ನೆರವೇರಿಸಿ ದರು. ಮಸೀದಿಯ ಅಧ್ಯಕ್ಷ ಮುಹಮ್ಮದ್ ಶಬೀರ್ ಕುಂಜಾಲ್, ಮಾಜಿ ಅಧ್ಯಕ್ಷ ಡಾ.ನೌಶಾದ್, ಕಾರ್ಯದರ್ಶಿ ಹುಸೈನ್ ಸಾಹೇಬ್, ಉಪಾಧ್ಯಕ್ಷ ಸೂಜಿದ್ ಖಾನ್, ಮಾಜಿ ಉಪಾಧ್ಯಕ್ಷ ಅಬ್ಬಾಸ್ ಉಪಸ್ಥಿತರಿದ್ದರು. ಅನಿಸ್ ಕಾರ್ಯಕ್ರಮ ನಿರೂಪಿಸಿದರು.

ಮಂಗಳ ಕಲಾ ಸಾಹಿತ್ಯ: ಪರ್ಕಳ ಮಂಗಳ ಕಲಾ ಸಾಹಿತ್ಯ ವೇದಿಕೆ ವತಿಯಿಂದ ೭೮ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಹಿರಿಯರು ಕಲಾ ಪೋಷಕ ಬೂದ ಶೆಟ್ಟಿಗಾರ್ ಪರ್ಕಳ ನೆರವೇರಿಸಿದರು.

ಈ ಸಂದರ್ಭದಲ್ಲಿ ವೇದಿಕೆ ಪೋಷಕ ಕೆ.ಪ್ರಕಾಶ್ ಶೆಣೈ, ಅಧ್ಯಕ್ಷ ಸಂದೀಪ್ ನಾಯ್ಕ್ ಕಬ್ಯಾಡಿ, ಸದಸ್ಯರಾದ ಗಣೇಶ್ ಸಣ್ಣಕ್ಕಿಬೆಟ್ಟು, ಗೋಪಿ ಹಿರೇಬೆಟ್ಟು, ಅಶೋಕ್ ಸಣ್ಣಕ್ಕಿಬೆಟ್ಟು, ಸುಧಾಕರ್ ನಾಯಕ್, ರಾಜೇಶ್ ನಾಯಕ್, ಗುರು ಪ್ರಸಾದ್ ಪ್ರಭು, ಅನಂತರಾಮ ನಾಯಕ್, ಗಣೇಶ್ ಕುಲಾಲ್, ರವಿರಾಜ್ ಆಚಾರ್ಯ, ಸಖರಾಮ್ ಶೆಟ್ಟಿಗಾರ್, ಉದಯಕುಮಾರ್ ಆಲಂಬಿ, ಶ್ರೀನಿವಾಸ್ ನಾಯಕ್ ಚಕ್ರತೀರ್ಥ ಉಪಸ್ಥಿತರಿದ್ದರು.

ಪರ್ಕಳ ಸ್ವಾಗತ ಫ್ರೆಂಡ್ಸ್: ಪರ್ಕಳ ಸ್ವಾಗತ್ ಫ್ರೆಂಡ್ಸ್ ವತಿಯಿಂದ ೭೮ನೆ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಧ್ವಜಾ ರೋಹಣವನ್ನು ಸಮಾಜ ಸೇವಕಿ ಶೆಟ್ಟಿ ಬೆಟ್ಟು ಅಮಿತಾ ಆರ್.ಹೆಗ್ಡೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಸ್ವಾಗತ ಫ್ರೆಂಡ್ಸ್ ಅಧ್ಯಕ್ಷ ಮೋಹನ್‌ದಾಸ್ ನಾಯಕ್, ಡಾ.ಸತೀಶ್ ಮಲ್ಯ, ಹಿರಿಯರಾದ ವಾಸು ಆಚಾರ್, ಶಂಕರ್ ನಾಯ್ಕ್, ಪ್ರಕಾಶ್ ನಾಯ್ಕ್, ನಾಗರಾಜ್ ನಾಯಕ್ ಬೈರಂಜೆ, ಸುಧೀರ್ ಶೆಟ್ಟಿ, ಹಿರಿಯಡ್ಕ ಸದಾ ಪೂಜಾರಿ, ಬಾಲಕೃಷ್ಣ ಶೆಟ್ಟಿ ಬನ್ನಂಜೆ, ರಾಮಚಂದ್ರ ನಂಬಿ ಯಾರ್ ಪರ್ಕಳ, ದೇವೇಂದ್ರ ನಾಯ್ಕ್, ಅಶೋಕ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಗಣೇಶ್‌ರಾಜ್ ಸರಳಬೆಟ್ಟು ಉಪಸ್ಥಿತರಿದ್ದರು.

ಮೂಡ್ಲಕಟ್ಟೆ ಐಎಂಜೆ: ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.

ಲೆಫ್ಟಿನೆಂಟ್ ಕರ್ನಲ್ ಎಂ.ಕೆ. ಶೆಟ್ಟಿ ಧ್ವಜಾರೋಹಣಗೈದರು. ಈ ಸಂದರ್ಭದಲ್ಲಿ ಕೆ.ವಿ.ಬಾಳಿಗ ಮೆಮೋರಿಯಲ್ ಆಸ್ಪತ್ರೆಯ ಮೆಡಿಕಲ್ ಆಫೀಸರ್ ಡಾ.ಸುನಿಲ್ ವ್ಯಸನದಿಂದ ಮುಕ್ತಿ ಕುರಿತು ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು ಸೋನ ಕಾರ್ಯಕ್ರಮ ನಿರೂಪಿಸಿದರು. ಸಿನ್ಸಿ ಸ್ವಾಗತಿಸಿದರು, ಅಭಿನವ್ ವಂದಿಸಿದರು.

ಮಾಣಿಕೊಳಲು ಮಸೀದಿ: ಹಕ್ಲಾಡಿ ಮಾಣಿಕೊಳಲು ಬದ್ರಿಯಾ ಜುಮ್ಮ ಮಸೀದಿಯಲ್ಲಿ ೭೮ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಅಧ್ಯಕ್ಷ ಇಬ್ರಾಹಿಂ ಮಾಣಿಕೊಳಲು ನೆರವೇರಿಸಿದರು. ಧರ್ಮಗುರು ಅನ್ಸಾರ್ ಸಖಾಫಿ ದುವಾ ನೆರವೇರಿಸಿದರು. ಕಾರ್ಯದರ್ಶಿ ಮುಹಮ್ಮದ್ ಸ್ವಾಗತಿಸಿ, ವಂದಿಸಿದರು.

ವೆಲ್‌ಫೇರ್ ಪಾರ್ಟಿ: ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲೆ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ ಯನ್ನು ಉಡುಪಿ ನಾಯರ್‌ಕೆರೆಯ ಅಬಕಾರಿ ಭವನದ ಎದುರು ಆಚರಿಸಲಾಯಿತು. ಚಿಂತಕ, ಬರಹಗಾರ ಸಂವರ್ತ್ ಸಾಹಿತ್ ದ್ವಜಾರೋಹಣವನ್ನು ನೆರವೇರಿಸಿ ದರು. ಪಕ್ಷದ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಉದ್ಯಾವರ ಮಾತನಾಡಿದರು. ಈ ಸಂದರ್ಭದಲ್ಲಿ ಪಕ್ಷದ ಸದಸ್ಯರು ಮತ್ತು ಗಣ್ಯರು ಉಪಸ್ದಿತರಿದ್ದರು.

ಜಿಲ್ಲಾ ನಾಗರಿಕ ಸಮಿತಿ: ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ವತಿಯಿಂದ ೭೮ನೇ ವರ್ಷದ ಸ್ವಾತಂತೋತ್ಸವವವನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಉಪ ಕಾನೂನು ನೆರವು ಅಭಿರಕ್ಷಕ ಶ್ರೀನಿವಾಸ ಉಪಾಧ್ಯ ಬಿ., ಸಂದ್ಯಾ ಶೆಣೈ, ಮಿತ್ರ ಸ್ಕೂಲ್ ಆಫ್ ನರಸಿಂಗ್‌ನ ಪ್ರಾಂಶುಪಾಲ ವನಿತಾ ಮತ್ತು ಸ್ಕೂಲಿನ ವಿದ್ಯಾರ್ಥಿಯರು, ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಬಿಲ್ಲವ ಸೇವಾ ಸಂಘ: ಅಂಬಲಪಾಡಿ ಬಿಲ್ಲವ ಸೇವಾ ಸಂಘ, ಶ್ರೀ ವಿಠೋಬ ಭಜನಾ ಮಂದಿರದ ವತಿಯಿಂದ ಸಂಘದ ವಠಾರದಲ್ಲಿ ನಡೆದ ೭೮ನೇ ಸ್ವಾತಂತ್ಯ ದಿನಾಚರಣೆಯ ಧ್ವಜಾರೋಹಣವನ್ನು ಸಂಘದ ಅಧ್ಯಕ್ಷ ಶಿವ ಕುಮಾರ್ ಅಂಬಲಪಾಡಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್, ಕೋಶಾಧಿಕಾರಿ ದಯಾನಂದ ಎ., ಜೊತೆ ಕಾರ್ಯದರ್ಶಿ ಅವಿನಾಶ್ ಕುಮಾರ್, ಆಡಳಿತ ಸಮಿತಿಯ ಸದಸ್ಯರಾದ ಎ.ಮುದ್ದಣ್ಣ ಪೂಜಾರಿ, ಸುಧಾಕರ್ ಎ., ನಿತಿನ್ ಕುಮಾರ್, ವಿನಯ್ ಕುಮಾರ್, ಜನಾರ್ಧನ ಪೂಜಾರಿ, ಮಹಿಳಾ ಘಟಕದ ಸಹ ಸಂಚಾಲಕಿ ದೇವಕಿ ಕೆ. ಕೋಟ್ಯಾನ್, ಸಂಘದ ಮಾಜಿ ಅಧ್ಯಕ್ಷ ಕೆ.ಮಂಜಪ್ಪ ಸುವರ್ಣ, ರಮೇಶ್ ಕೋಟ್ಯಾನ್, ಭಜನಾ ಸಹ ಸಂಚಾಲಕ ಶಂಕರ ಪೂಜಾರಿ ಹಾಗೂ ನವೀನ್ ಕುಮಾರ್, ಆನಂದ ಕೋಟ್ಯಾನ್, ಪ್ರಖ್ಯಾತ್ ಎಸ್.ಕುಮಾರ್ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಕಾಂಗ್ರೆಸ್‌ನಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ

ಉಡುಪಿ ಜಿಲ್ಲಾ ಕಾಂಗ್ರೆಸ್ ಹಾಗೂ ಜಿಲ್ಲಾ ಸೇವಾದಳ ಜಂಟಿಯಾಗಿ ಉಡುಪಿ ನಗರದ ಬಸ್ ನಿಲ್ದಾಣದ ಗಾಂಧಿ ಸ್ಮಾರಕ ಚೌಕದ ಎದುರು ಹಮ್ಮಿಕೊಂಡ ೭೮ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಧ್ವಜಾ ರೋಹಣವನ್ನು ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯಕುಮಾರ್ ಸೊರಕೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ದಿನೇಶ್ ಪುತ್ರನ್, ಭಾಸ್ಕರ ರಾವ್ ಕಿದಿಯೂರು, ಹರೀಶ್ ಕಿಣಿ, ಪ್ರಖ್ಯಾತ್ ಶೆಟ್ಟಿ, ಬಿ.ನರಸಿಂಹ ಮೂರ್ತಿ, ಮಹಾಬಲ ಕುಂದರ್, ಸದಾಶಿವ ಕಟ್ಟಗುಡ್ಡೆ, ಜ್ಯೋತಿ ಹೆಬ್ಬಾರ್, ರಮೇಶ್ ಕಾಂಚನ್, ಫಾ.ಮಿಲಿಯಂ ಮಾರ್ಟೀಸ್, ಪ್ರಶಾಂತ ಜತ್ತನ್ನ, ಕೀರ್ತಿ ಶೆಟ್ಟಿ, ಉದ್ಯಾವರ ನಾಗೇಶ್ ಕುಮಾರ್, ಸೇವಾದಳದ ಕಿಶೋರ್ ಕುಮಾರ್ ಎರ್ಮಾಳ್, ರಾಜು ಪೂಜಾರಿ, ಲಕ್ಷ್ಮೀ ನಾಯಕ್, ಶರತ್ ನಾಯಕ್, ಪ್ರದೀಪ್, ಜಗನ್ನಾಥ ಪೂಜಾರಿ, ಸರ್ಪುದ್ದೀನ್ ಶೇಖ್, ಇಸ್ಮಾಯಿಲ್ ಅತ್ರಾಡಿ, ಹರೀಶ್ ಶೆಟ್ಟಿ ಪಾಂಗಾಳ, ಸುನಿಲ್ ಬಂಗೇರ, ಕೃಷ್ಣ ಹೆಬ್ಬಾರ್, ಹರೀಶ್ ಸುವರ್ಣ, ರಮಾನಂದ ಪೈ, ಲಕ್ಷ್ಮಣ ಪೂಜಾರಿ, ಸಂಧ್ಯಾ ತಿಲಕ್, ಮೀನಾಕ್ಷಿ ಮಾಧವ ಬನ್ನಂಜೆ ಮೊದಲಾದವರು ಉಪಸ್ಥಿತರಿದ್ದರು.

ಬಿಜೆಪಿಯಿಂದ ಸ್ವಾತಂತ್ರ್ಯ ದಿನಾಚರಣೆ

ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ೭೮ನೇ ಸ್ವಾತಂತ್ರ್ಯ ದಿನವನ್ನು ಬಿಜೆಪಿ ಜಿಲ್ಲಾ ಕಚೇರಿಯ ಬಳಿ ನೆರವೇರಿಸಲಾಯಿತು .

ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಧ್ವಜಾರೋಹಣ ನೆರವೇರಿಸಿದರು. ಉಡುಪಿ ಶಾಸಕ ಯಶ್ಪಾಲ್ ಎ.ಸುವರ್ಣ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮುಖಂಡರಾದ ಪೆರಣಂಕಿಲ ಶ್ರೀಶ ನಾಯಕ್, ರೇಷ್ಮಾ ಉದಯ ಶೆಟ್ಟಿ, ರಾಘವೇಂದ್ರ ಕುಂದರ್, ಸತ್ಯಾನಂದ ನಾಯಕ್, ಶ್ರೀನಿಧಿ ಹೆಗ್ಡೆ, ಗಿರೀಶ್ ಎಂ.ಅಂಚನ್, ಸಂಧ್ಯಾ ರಮೇಶ್, ವೀಣಾ ಎಸ್.ಶೆಟ್ಟಿ, ರುಡಾಲ್ಫ್ ಡಿಸೋಜ, ಶ್ರೀಕಾಂತ್ ಕಾಮತ್, ಜಗದೀಶ್ ಆಚಾರ್ಯ ಕಪ್ಪೆಟ್ಟು, ರಶ್ಮಿತಾ ಬಿ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಉಡುಪಿ ಜೆಡಿಎಸ್: ಸ್ವಾತಂತ್ರೋತ್ಸವ ಆಚರಣೆ

ಉಡುಪಿ ಜಿಲ್ಲಾ ಜೆಡಿಎಸ್ ಪಕ್ಷ ಕಚೇರಿಯಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಜಿಲ್ಲಾಧ್ಯಕ್ಷ ಯೋಗೀಶ್ ವಿ.ಶೆಟ್ಟಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಧ್ಯಕ್ಷ ವಾಸುದೇವ ರಾವ್, ನಾಯಕರಾದ ಜಯಕುಮಾರ್ ಪರ್ಕಳ, ಬಾಲಕೃಷ್ಣ ಆಚಾರ್ಯ ಕಪ್ಪೆಟ್ಟು, ಗಂಗಾಧರ್ ಬಿರ್ತಿ, ರಾಮರಾವ್, ದೇವರಾಜ್, ಪದ್ಮನಾಭ ಕೋಟ್ಯಾನ್, ರವಿಚಂದ್ರ, ರಶೀದ್, ಪ್ರಶಾಂತ್ ಕೆ., ಪ್ರಶಾಂತ್ ಮಡಿವಾಳ್, ರಂಗನಾಥ್ ಕೋಟ್ಯಾನ್ ಹಾಗೂ ಪಕ್ಷ ಕಾರ್ಯಕರ್ತರು ಉಪಸ್ಥಿತರಿದ್ದರು.






Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News