ಚಿತ್ರನಟ ಉಪೇಂದ್ರರನ್ನು ಬಂಧಿಸುವಂತೆ ಜಯನ್ ಮಲ್ಪೆ ಆಗ್ರಹ
Update: 2023-08-13 20:47 IST

ಉಪೇಂದ್ರ
ಉಡುಪಿ, ಆ.13: ಜಾತಿನಿಂದನೆ ಮಾಡಿದ ಚಿತ್ರನಟ, ನಿರ್ದೇಶಕ ಹಾಗೂ ನಿರ್ಮಾಪಕ ಉಪೇಂದ್ರರನ್ನು ತಕ್ಷಣವೇ ಬಂಧಿಸು ವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಹಾಗೂ ದಲಿತ ಚಿಂತಕ ಜಯನ್ ಮಲ್ಪೆ ಆಗ್ರಹಿಸಿದ್ದಾರೆ.
ದಲಿತ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಅವಹೇಳನಕಾರಿಯಾಗಿ ಜಾತಿನಿಂದನೆ ಮಾಡಿರುವುದು ಖಂಡನೀಯ. ಇಂತಹ ಮನಸ್ಥಿತಿ ಇರುವ ನಟ ಉಪೇಂದ್ರನ ಎಲ್ಲಾ ಚಲನ ಚಿತ್ರಗಳನ್ನು ಬಹಿಷ್ಕರಿಸಬೇಕು. ಇವರ ವಿರುದ್ಧ ರಾಜ್ಯಾದ್ಯಂತ ದಲಿತ ಸಂಘಟನೆಗಳು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಅವರು ಹೇಳಿಕೆಯಲ್ಲಿ ಕರೆ ನೀಡಿದ್ದಾರೆ.