ಕುಂದಾಪುರ | ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ ಚಿರತೆ ಬೋನಿನಲ್ಲಿ ಸೆರೆ!

Update: 2025-01-17 11:39 IST
ಕುಂದಾಪುರ | ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ ಚಿರತೆ ಬೋನಿನಲ್ಲಿ ಸೆರೆ!
  • whatsapp icon

ಕುಂದಾಪುರ: ಕೋಣಿ ಗ್ರಾ.ಪಂ ವ್ಯಾಪ್ತಿಯ ಮಾರ್ಕೋಡು ಎಂಬಲ್ಲಿ ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ಕಾಣಿಸಿಕೊಳ್ಳುತ್ತ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಮಾರ್ಕೋಡು ಗುಡ್ಡೆಶಾಲೆ ಅಂಗನವಾಡಿ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ.

ಅಂಗನವಾಡಿ, ಮನೆಗಳಿರುವ ಈ ಪ್ರದೇಶದಲ್ಲಿ ಚಿರತೆ ಓಡಾಟ ಹಾಗೂ ಚಿರತೆ ಕೂಗುವ ಸದ್ದು ಕೇಳಿಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅದರಂತೆ ಆಗಮಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಗುಡ್ಡೆಶಾಲೆ ಬಳಿ ಬೋನಿರಿಸಿ ಚಿರತೆ ಸೆರೆಗೆ ಕಾರ್ಯಾಚರಣೆ ಸಿದ್ಧಪಡಿಸಲಾಗಿತ್ತು. ಈ ಬೋನಿನಲ್ಲಿ ಅಂದಾಜು 2-3 ವರ್ಷ ಪ್ರಾಯದ ಚಿರತೆ ಸೆರೆಯಾಗಿರುವುದು ಶುಕ್ರವಾರ ಕಂಡುಬಂದಿದೆ. ಅರಣ್ಯಾಧಿಕಾರಿಗಳು ಭೇಟಿ ನೀಡಿ ಚಿರತೆಯನ್ನು ಕೊಂಡೊಯ್ದಿದ್ದು ರಕ್ಷಿತಾರಣ್ಯಕ್ಕೆ ಬಿಡುವ ಬಗ್ಗೆ ಮಾಹಿತಿ ನೀಡಿದ್ದಾರೆ. ಚಿರತೆಯನ್ನು ಕಾಣಲು ನೂರಾರು ಮಂದಿ ಜಮಾಯಿಸಿದ್ದರು.

ಕುಂದಾಪುರ ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಉಪವಲಯ ಅರಣ್ಯಾಧಿಕಾರಿ ವಿನಯ್, ಗಸ್ತು ಅರಣ್ಯ ಪಾಲಕರಾದ ಮಾಲತಿ, ಅಶೋಕ್, ಅರಣ್ಯ ವೀಕ್ಷಕ ಸೋಮಶೇಖರ್ ಹಾಗೂ ಸಾರ್ವಜನಿಕರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News