ಕುಂದಾಪುರ | ದಲಿತ ಹಕ್ಕುಗಳ ಸಮಿತಿಯಿಂದ ಜನಜಾಗೃತಿ ಸಭೆ

ಕುಂದಾಪುರ : ದಲಿತ ಹಕ್ಕುಗಳ ಸಮಿತಿ(ಡಿಎಚ್‌ಎಸ್) ವತಿಯಿಂದ ಜನಜಾಗೃತಿ ಸಭೆ ಪಾರಂಪಳ್ಳಿ ಗ್ರಾಮದ ಗೆಂಡೆಕೆರೆಯಲ್ಲಿ ರವಿವಾರ ನಡೆಯಿತು.
ಸಮಿತಿಯ ಜಿಲ್ಲಾ ಸಂಚಾಲಕ ಸಂಜೀವ ಬಳ್ಕೂರು, ತಾಲೂಕು ಸಹ ಸಂಚಾಲಕ ರಾಮ ಕಾರ್ಕಡ, ಹಿರಿಯ ಚಿಂತಕ ಕೆ.ಬಿ.ಅಣ್ಣಯ್ಯ ಹಾಗೂ ಜನಪರ ಹೋರಾಟಗಾರ ಶ್ರೀರಾಮ ದಿವಾಣ ಸಭೆಯನ್ನುದ್ಧೇಶಿಸಿ ಮಾತನಾಡಿದರು. ಸಾಲಿಗ್ರಾಮ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷೆ ಸುಧಾ ಅಧ್ಯಕ್ಷತೆ ವಹಿಸಿದ್ದರು.
ದಲಿತ ಹಕ್ಕುಗಳ ಸಮಿತಿಯ ಧ್ಯೇಯೋದ್ಧೇಶಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಇಂದಿನ ಸಾಮಾಜಿಕ ಸ್ಥಿತಿ ಗತಿ, ಸರಕಾರದ ಯೋಜನೆಗಳ ಜಾರಿಯಲ್ಲಾಗುತ್ತಿರುವ ಲೋಪಗಳು, ನಿಧಿಗಳ ದುರ್ಬಳಕೆ, ದಲಿತ ದೌರ್ಜನ್ಯಗಳು ಇತ್ಯಾದಿ ವಿಚಾರಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸ ಲಾಯಿತು.
ಸಭೆಯಲ್ಲಿ ಸಮಿತಿ ಪ್ರಮುಖರಾದ ಶಾರದಾ ಗುಂಡ್ಮಿ ಹಾಗೂ ಬಾಬಣ್ಣ ಉಪಸ್ಥಿತರಿದ್ದರು. ಸಾಧು ಪಿ., ನಾಗರಾಜ ಗೆಂಡೆಕೆರೆ, ಜಲಜ, ಸುಶೀಲಾ, ಐತ, ಕರಿಯಣ್ಣ, ಲಕ್ಷ್ಮಿ, ದೀಕ್ಷಾ, ನಿಷ್ಕ ಸಂಚಾಲಕತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.