ಉಡುಪಿ ಜಿಲ್ಲೆಯಲ್ಲಿ ಇಎಸ್‌ಐ ಆಸ್ಪತ್ರೆಗಾಗಿ ಪತ್ರ ಆಂದೋಲನ
ಉಡುಪಿ, ಆ.21: ಉಡುಪಿ ಜಿಲ್ಲೆಗೆ ಕಾರ್ಮಿಕ ವಿಮಾ ಯೋಜನೆ (ಇಎಸ್‌ಐ)ಯಡಿ ಯಲ್ಲಿ 100 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಕೇಂದ್ರ ಸರಕಾರವು ಕಾರ್ಮಿಕ ವೀಮಾ ಯೋಜನೆಯ ನಿರ್ದೇಶಕರಿಗೆ ಒಪ್ಪಿಗೆ ಪತ್ರವನ್ನು ಹೊರಡಿಸಿದೆ. ಆದರೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಹಾಗೂ ರಾಜಕಾರಣಿಗಳು ಈ ಆಸ್ಪತ್ರೆ ಬಾರದಂತೆ ತಡೆ ಮಾಡುತ್ತಿ ದ್ದಾರೆ ಎಂದು ದಿ ಕಾಮನ್ ಪೀಪಲ್ ವೆಲ್ಫೇರ್ ಫೌಂಡೇಶನ್ ಇದರ ಅಧ್ಯಕ್ಷ ಗೋಪಾಲಯ್ಯ ಅಪ್ಪು ಕೋಟೆಯಾರ್ ಆರೋಪಿಸಿದ್ದಾರೆ.
ಕೇಂದ್ರ ಸರಕಾರ ಹಾಗೂ ಕಾರ್ಮಿಕ ವಿಮಾ ಯೋಜನೆ ಅಧಿಕಾರಿಗಳು ಕಾನೂನಾತ್ಮಕವಾಗಿ ಉಡುಪಿ ಜಿಲ್ಲೆಗೆ 10 ಹಾಸಿ ಗೆಯ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನು ಮಂಜೂರು ಮಾಡಿ ಜಾಗವನ್ನು ಹುಡುಕುವ ಸಮಯದಲ್ಲಿ ಭ್ರಷ್ಟಾಚಾರಿ ಅಧಿಕಾರಿಗಳು ಅಡ್ಡಗಾಲು ಹಾಕುತ್ತಿದ್ದಾರೆ. ಅದಕ್ಕಾಗಿ ದಿ ಕಾಮನ್ ಪೀಪಲ್ ವೆಲ್ಫೇರ್ ಫೌಂಡೇಶನ್ ಪತ್ರ ಆಂದೋಲನ ವನ್ನು ಆರಂಭಿಸಿದೆ.
ಈ ಆಂದೋಲನದಂತೆ ಪ್ರಧಾನ ಮಂತ್ರಿ, ಕಾರ್ಮಿಕ ಸಚಿವರು, ಕಾರ್ಮಿಕ ವಿಮಾ ಯೋಜನೆಯ ಅಧ್ಯಕ್ಷರು, ಕರ್ನಾಟಕದ ಮುಖ್ಯಮಂತ್ರಿ, ರಾಜ್ಯ ಕಾರ್ಮಿಕ ಸಚಿವರು, ಕರ್ನಾಟಕದ ಕಾರ್ಮಿಕ ವಿಮಾ ಯೋಜನೆ ಅಧಿಕಾರಿಗಳಿಗೆ ಹಾಗೂ ಉಡುಪಿ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲಾ ಸರಕಾರಿ ಅಧಿಕಾರಿಗಳಿಗೆ ಪತ್ರವನ್ನು ಬರೆಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೆ.3ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಮುಷ್ಕರವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಗೋಪಾಲಯ್ಯ ಅಪ್ಪು ಕೋಟೆಯಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.