ಮಲ್ಪೆ | ನಿಂತಿದ್ದ ಬಸ್ಸಿಗೆ ಬೈಕ್ ಢಿಕ್ಕಿ: ಸವಾರ ಗಂಭೀರ

Update: 2024-07-16 04:04 GMT

ಮಲ್ಪೆ, ಜು.16: ನಿಂತಿದ್ದ ಬಸ್ಸಿಗೆ ಹಿಂಬದಿಯಿಂದ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಮಲ್ಪೆ ಸಿಟಿಜನ್ ಸರ್ಕಲ್ ಸಮೀಪದ ನೆರ್ಗಿ ಎಂಬಲ್ಲಿ ಇಂದು ಬೆಳಗ್ಗೆ 7:30ರ ಸುಮಾರಿಗೆ ನಡೆದಿದೆ.

ಗಾಯಾಳುವನ್ನು ಉಡುಪಿ ಗುಂಡಿಬೈಲು ನಿವಾಸಿ ಲಕ್ಷ್ಮಣ್ (60) ಎಂದು ಗುರುತಿಸಲಾಗಿದೆ. ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ತಮ್ಮ ಆ್ಯಂಬುಲೆನ್ಸ್ ಮೂಲಕ ಗಾಯಾಳುವನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಲಕ್ಷ್ಮಣ್ ಅವರಿಗೆ ಗುಂಡಿಬೈಲು ವಿನಲ್ಲಿ ಕಾರ್ತಿಕ್ ವೆಲ್ಡಿಂಗ್ ವರ್ಕ್ ಶಾಪ್ ಇದೆ ಎಂದು ಹೇಳಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News