ಮಣಿಪಾಲ: ಬ್ಯಾಂಕ್ ವಿವರ ಪಡೆದು ಲಕ್ಷಾಂತರ ರೂ. ವಂಚನೆ
Update: 2024-01-01 15:26 GMT
ಮಣಿಪಾಲ, ಜ.1: ತಾಯಿಯ ಲೈಫ್ ಸರ್ಟಿಫಿಕೇಟ್ ಅಪ್‌ಡೇಟ್ ಮಾಡುವುದಾಗಿ ಹೇಳಿ ಬ್ಯಾಂಕ್ ವಿವರ ಪಡೆದು ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಯಿಯ ಲೈಫ್ ಸರ್ಟಿಫಿಕೇಟ್ ಬ್ಯಾಂಕ್‌ನಲ್ಲಿ ಅಪ್‌ಡೇಟ್ ಆಗಲಿಲ್ಲ ಎಂಬುದಾಗಿ ಬಂದ ಅಂಚೆ ಪತ್ರದಂತೆ ಮಣಿಪಾಲ ಎಂಡ್‌ಪಾಯಿಂಟ್ ನಿವಾಸಿ ರವೀಂದ್ರನ್ ಎಸ್. ಡಿ.30ರಂದು ಕೆನರಾ ಬ್ಯಾಂಕ್ ಕಸ್ಟಮರ್ ಕೇರ್‌ಗೆ ಕಾಲ್ ಮಾಡಿದ್ದರು.
ಕರೆ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಂತರ ಬ್ಯಾಂಕ್ ಉದ್ಯೋಗಿ ಎಂಬುದಾಗಿ ಕರೆ ಮಾಡಿದ ಅಪರಿಚಿತ ವ್ಯಕ್ತಿ, ತಾಯಿಯ ಸರ್ಟಿಫಿಕೇಟ್ ಅಪ್ಡೇಟ್ ಮಾಡಲು ವ್ಯಾಟ್ಸಾಪ್‌ನಿಂದ ರವೀಂದ್ರನ್ ಅವರ ಮೊಬೈಲ್‌ಗೆ ಲಿಂಕ್ ಕಳಿಸಿದ್ದನು. ಅದರಂತೆ ರವೀಂದ್ರನ್ ಮೊಬೈಲ್‌ನಲ್ಲಿ ಆಧಾರ್ ಸಂಖ್ಯೆ, ಬ್ಯಾಂಕ್ ಪಾಸ್ ವರ್ಡ್ ಹಾಗೂ ಬ್ಯಾಂಕ್ ಡಿಟೇಲ್‌ನ್ನು ಹಾಕಿದ್ದರು. ನಂತರ ರವೀಂದ್ರನ್ ಖಾತೆಯಿಂದ ವಿವಿಧ ಹಂತದಲ್ಲಿ ಇಒಟ್ಟು 2,49,989ರೂ. ಹಣವನ್ನು ವರ್ಗಾವಣೆ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ.