ರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಲೀಗ್‌ಗೆ ಚಾಲನೆ
ಉಡುಪಿ, ಸೆ.2: ಬುಡೋಕಾನ್ ಸ್ಪೋರ್ಟ್ಸ್ ಕರಾಟೆ-ಡೋ ಅಸೋಸಿ ಯೆಶನ್ ಆಫ್ ಇಂಡಿಯ ವತಿಯಿಂದ ಮಣಿಪಾಲದ ಆರ್‌ಎಸ್‌ಬಿ ಸಭಾ ಭವನದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಮಟ್ಟದ ಆಹ್ವಾನಿತರ ಓಪನ್ ಚಾಂಪಿಯನ್ ಲೀಗ್ ಬ್ಲಾಸ್ಟ್-ಸೀಸನ್ 2ಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಕರಾಟೆ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ನದೀಮ್ ಮೂಡುಬಿದಿರೆ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ರಾಜ್ಯ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಶಿಹಾನ್ ಶಿವಮೊಗ್ಗ ವಿನೋದ್ ವಹಿಸಿದ್ದರು. ನಗರಸಭೆ ಸದಸ್ಯ ಬಾಲಕೃಷ್ಣ ಶೆಟ್ಟಿ ಮಾತನಾಡಿದರು.
ಕರಾಟೆ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕಿರಣ್ ಕುಂದಾಪುರ, ಸ್ವಾಗತ ಸಮಿತಿ ಗೌರವಾಧ್ಯಕ್ಷ ಕೆ.ಲೀಲಾಧರ್ ಶೆಟ್ಟಿ, ಅಧ್ಯಕ್ಷ ಪ್ರಸನ್ನ ಶೆಟ್ಟಿ ಬೈಲೂರು, ಉಪಾಧ್ಯಕ್ಷ ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಪಾಧ್ಯಕ್ಷ ಶರತ್ ಉಚ್ಚಿಲ, ಪ್ರಮುಖರಾದ ಶರತ್ ಮಂಗಳೂರು, ಸತೀಶ್ ಬೆಳ್ಮಣ್ಣು, ರೋಹಿತಾಕ್ಷ ಉದ್ಯಾವರ, ವಾಮನ ಪಾಲನ್, ಶ್ರೀಧರ, ಕೃಷ್ಣ ಜೆ.ಕೋಟ್ಯಾನ್, ಪ್ರವೀಣಾ ಸುವರ್ಣ, ಸುರೇಶ್ ಆಚಾರ್ಯ, ದಯಾನಂದ ಉಪಸ್ಥಿತರಿದ್ದರು.
ಸಂಘಟನಾ ಸಮಿತಿ ಅಧ್ಯಕ್ಷ ರಘುರಾಜ ಪಣಿಯಾಡಿ ಪ್ರಾಸ್ತಾವಿಕವಾಗಿ ಮಾತ ನಾಡಿದರು. ರವಿ ಕೋಟ್ಯಾನ್ ಸ್ವಾಗತಿಸಿ ದರು. ಮೇಘಾ ಅಂಬಲಪಾಡಿ ವಂದಿಸಿದರು. ವಿನೋದ್ ಮಂಚಿ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲೆಯ ಹಿರಿಯ ಕರಾಟೆ ಪಟು, ಮಾರ್ಗದರ್ಶಕ ದಿ| ನಿತ್ಯಾನಂದ ಕೆಮ್ಮಣ್ಣು ಅವರ ಸ್ಮರಣಾರ್ಥ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಸ್ಪರ್ಧೆಯಲ್ಲಿ ಕೇರಳ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ದಿಂದ ಸುಮಾರು 1,200ಕ್ಕೂ ಅಧಿಕ ಮಂದಿ ಕರಾಟೆ ಸ್ಪರ್ಧಾಳುಗಳು ಭಾಗವಹಿಸಿದ್ದರು. 16 ವರ್ಷದೊಳಗಿನ ಹಾಗೂ 16 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಸ್ಪರ್ಧೆ ನಡೆದವು. ಸುಮಾರು 100ರಷ್ಟು ಮಂದಿ ತೀರ್ಪುಗಾರರು ಭಾಗವಹಿಸಿದರು.