ನೇಜಾರು: ತಾಯಿ, ಮಕ್ಕಳ ಹತ್ಯೆ ಪ್ರಕರಣ; ಉಸ್ತುವಾರಿ ಸಚಿವರ ಮೌನದ ಬಗ್ಗೆ ಸಾರ್ವಜನಿಕರ ಅಸಮಾಧಾನ
Update: 2023-11-13 08:52 GMT
Photo: facebook/Laxmihebbalkarofficial
ಉಡುಪಿ: ಕರಾವಳಿಯನ್ನೇ ಬೆಚ್ಚಿ ಬೀಳಿಸಿದ ತಾಯಿ ಹಾಗೂ ಮೂವರು ಮಕ್ಕಳ ಹತ್ಯೆ ನಡೆದು ಒಂದೂವರೆ ದಿನ ಕಳೆದಿದ್ದರೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಭೇಟಿ ನೀಡದಿರುವುದು ಅಥವಾ ಹೇಳಿಕೆ ನೀಡದೆ ಇರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ .
ಉಸ್ತುವಾರಿ ಸಚಿವರು ಮೂಲತಃ ಬೆಳಗಾವಿಯವರಾಗಿದ್ದು, ಕೂಡಲೇ ಭೇಟಿ ನೀಡುವುದು ಅಸಾಧ್ಯವಾಗಿದ್ದರೂ, ಇಷ್ಟು ದೊಡ್ಡ ಘಟನೆಯ ಬಗ್ಗೆ ಕನಿಷ್ಟ ಪಕ್ಷ ಒಂದು ಹೇಳಿಕೆಯನ್ನಾದರೂ ನೀಡಬಹುದಿತ್ತು ಎಂಬ ಮಾತುಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿದೆ.
ತಾಯಿ ಮಕ್ಕಳ ಹತ್ಯೆಯಿಂದ ಇಡೀ ಉಡುಪಿ ಬೆಚ್ಚಿ ಬಿದ್ದಿದೆ. ಆದರೆ ಜಿಲ್ಲೆಯ ಉಸ್ತುವಾರಿ ಸಚಿವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನೇ ನೀಡದಿರುವುದು ಜಿಲ್ಲೆಯ ಜನರ ನಡುವೆ ಚರ್ಚೆಗೆ ಕಾರಣವಾಗಿದೆ.