ಮಾಧ್ಯಮಗಳ ಸುಳ್ಳು ಸುದ್ದಿಗಳಿಂದ ಸಮಾಜದ ಸ್ವಾಸ್ಥ್ಯ ಹಾಳು: ಸ್ವರ್ಣ ಭಟ್
ಉಡುಪಿ, ಅ.8: ವಾಟ್ಸಾಪ್, ಪೇಸ್‌ಬುಕ್ ನಂತಹ ಸಾಮಾಜಿಕ ತಾಣಗಳಲ್ಲಿ ಸತ್ಯಕ್ಕಿಂತ ಸುಳ್ಳು ಸುದ್ದಿಗಳೇ ನಮ್ಮ ನಡುವೆ ಹೆಚ್ಚಾಗಿ ಹಂಚಿಕೆ ಆಗುತ್ತಿದೆ. ಇಂತಹ ಸುಳ್ಳು ಸುದ್ದಿಗಳು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದೆ. ನಮಗೆ ಬರುವ ಸುದ್ದಿ ಗಳನ್ನು ಪರಾಮರ್ಶೆ ನಡೆಸದೆ ಷೇರ್ ಮಾಡುತ್ತಿದ್ದೇವೆ. ಇದರಿಂದಾಗಿ ಪರಸ್ಪರ ಸಂಬಂಧಗಳೇ ಹಾಳಾಗುತ್ತಿವೆ ಎಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘದ ರಾಜ್ಯ ಸಂಚಾಲಕಿ ಸ್ವರ್ಣ ಭಟ್ ಹೇಳಿದ್ದಾರೆ.
ಉಡುಪಿಯ ಮಿಲಾಗ್ರಿಸ್ ಕಾಲೇಜಿನಲ್ಲಿ ನಡೆದ ಈ ದಿನ ನಾಗರಿಕ ಪತ್ರಕರ್ತರ ಸಮಾಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿ ದ್ದರು. ನಮ್ಮ ಮೊಬೈಲ್ ಗೆ ಬಂದ ಸುದ್ದಿಗಳೇ ನಾವು ಸತ್ಯ ಎಂದು ನಂಬುವಷ್ಟರ ಮಟ್ಟಿಗೆ ನಾವು ಸುಳ್ಳು ಸುದ್ದಿಗಳಿಗೆ ಅವಲಂಭಿತರಾಗಿದ್ದೇವೆ. ಮಾಧ್ಯಮಗಳು ಸುಳ್ಳುಗಳನ್ನು ಬಿತ್ತರಿಸದೇ ಸತ್ಯ ಸುದ್ದಿಗಳನ್ನು ಬಿತ್ತರಿಸುವ ಮೂಲಕ ಸಮಾಜದ ಕನ್ನಡಿಯಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಸಹಬಾಳ್ವೆ ಉಡುಪಿಯ ನಾಗೇಶ್ ಉದ್ಯಾವರ್, ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವಾ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸುಂದರ್ ಮಾಸ್ಟರ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಸದಸ್ಯ ಪೀರ್ ಸಾಹೇಬ್ ಮಾತನಾಡಿದರು.
ಅಧ್ಯಕ್ಷತೆಯನ್ನು ಮಾಸ್ ಮೀಡಿಯಾ ಫೌಂಡೇಶನ್‌ನ ವ್ಯವಸ್ಥಾಪಕ ಉಮರ್ ಯು.ಎಚ್. ವಹಿಸಿದ್ದರು. ಈದಿನ.ಕಾಮ್ ಕರಾವಳಿ ವಲಯ ವರದಿಗಾರ ಶಾರೂಕ್ ತೀರ್ಥಹಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.