ಕೋಡಿ ಬ್ಯಾರೀಸ್ ಕಾಲೇಜಿನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕಾರ್ಯಗಾರ

Update: 2024-09-20 14:55 GMT

ಕುಂದಾಪುರ, ಸೆ.20: ಕೋಡಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಅಡಿಯಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕಾರ್ಯಾಗಾರ ಬೀಹೈವ್ ಕನ್ವೆನ್ಷನ್ ಹಾಲ್‌ನಲ್ಲಿ ಜರಗಿತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಬ್ಯಾರಿಸ್ ಗ್ರೂಪ್‌ನ ಡಿಜಿಟಲ್ ಮೀಡಿಯಾ ಎಕ್ಸಲೆನ್ಸ್ ಮ್ಯಾನೇಜರ್ ಸಾನಿಯಾ ಅನ್ವರ್ ಮಾತನಾಡಿದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿಶ್ವಸ್ಥ ಮಂಡಳಿಯ ಸದಸ್ಯ ಡಾ.ಆಸಿಫ್ ಬ್ಯಾರಿ, ಇಂದಿನ ಆಧುನಿಕ ಯುಗದಲ್ಲಿ ಡಿಜಿಟಲ್ ಮಾರ್ಕೆಟಿಂಗ್‌ನ ಪ್ರಾಮುಖ್ಯತೆಯನ್ನು ವಿವರಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಸಾನಿಯಾ ಅನ್ವರ್, ಡಿಜಿಟಲ್ ಮಾರ್ಕೆಟ್‌ನ ಬಗ್ಗೆ, ಎಸ್‌ಇಒ ಬಗ್ಗೆ, ಪೋಸ್ಟರ್, ವಿಡಿಯೋ, ಲೋಗೋಗಳನ್ನು ರಚಿಸುವ ಕುರಿತು ಮಾಹಿತಿ ನೀಡಿದರು. ಹೊಸ ಹೊಸ ಅಪ್ಲಿಕೇಶನನ್ನು ನಾವಾಗಿಯೇ ಹುಟ್ಟು ಹಾಕ ಬೇಕು. ಪ್ರತಿಯೊಬ್ಬರಲ್ಲೂ ಪ್ರಾಯೋಗಿಕ ಜ್ಞಾನ ಇರಬೇಕು. ನಮಗೆ ಯಾರಾದರೂ ಪೋಸ್ಟರ್ ಮಾಡಿ ಕೊಡಿ ಎಂದರೆ ಯಾವತ್ತೂ ಆಗುವುದಿಲ್ಲ ಎನ್ನಬಾರದು. ಅದರ ಬದಲು ಅದನ್ನು ನಾವು ಧನಾತ್ಮಕವಾಗಿ ಪರಿಗಣಿಸಿ ಬೇರೆಯವರಿಂದ ಕಲಿತಾದರೂ ನಾವು ಮಾಡಬೇಕು. ಆಗ ನಮ್ಮ ಜೀವನದಲ್ಲಿ ಮುನ್ನಡೆಯನ್ನು ಪಡೆಯಲು ಸಾಧ್ಯ. ಅಲ್ಲದೆ ವಿದ್ಯಾರ್ಥಿಗಳಿಗೆ ಪೋಸ್ಟರ್ ಒಂದನ್ನು ರಚನೆ ಮಾಡಲು ಕೊಟ್ಟು ಅದರಲ್ಲಿ ಅತ್ಯುತ್ತಮವಾಗಿ ಮಾಡಿದವರಿಗೆ ಮೆಚ್ಚುಗೆಯನ್ನು ಸಲ್ಲಿಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ.ಅಬ್ದುಲ್ ರೆಹಮಾನ್ ಬ್ಯಾರಿ ಮಾತನಾಡಿ, ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಈಗ ಕುಳಿತಲ್ಲಿಯೇ ನಮಗೆ ಬೇಕಾದ ಪ್ರತಿಯೊಂದು ವಸ್ತುಗಳನ್ನು ನಾವು ಕೊಂಡುಕೊಳ್ಳಬಹುದು. ಹಾಗೆಯೇ ಡಿಜಿಟಲ್ ಮಾರ್ಕೆಟಿಂಗ್‌ನಿಂದ ಒಳ್ಳೆಯದು ಇದೆ, ಕೆಟ್ಟದು ಇದೆ. ಆದರೆ ನಾವು ಒಳ್ಳೆಯದನ್ನ ಸ್ವೀಕರಿಸಿ, ಒಳ್ಳೆಯದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಶಬೀನಾ ಎಚ್., ಪದವಿ ಪೂರ್ವ ಹಾಗೂ ಬ್ಯಾರೀಸ್ ಸೀಸೈಡ್ ಸ್ಕೂಲ್‌ನ ಪ್ರಾಂಶುಪಾಲೆ ಅಶ್ವಿನಿ ಶೆಟ್ಟಿ, ಬ್ಯಾರಿಸ್ ಗ್ರೂಪ್ ಚೇರ್ಮೆನ್ ಅವರ ವೈಯಕ್ತಿಕ ಕಾರ್ಯದರ್ಶಿ ಸಲಾಂ ತೋಡಾರ್, ಐಟಿ ಅಸೋಸಿಯೇಷನ್‌ನ ಕೊ-ಆರ್ಡಿನೇಟರ್ ಅಹಮದ್ ಖಲೀಲ್ ಮತ್ತು ಆಯೀಶ ರಿಸ್ವಾ ಹಾಗೂ ಕಾಮರ್ಸ್ ಅಸೋಸಿಯೇಷನ್‌ನ ಕೊ-ಆರ್ಡಿನೇಟರ್ ಕರುಣಾಕರ್ ಶೆಟ್ಟಿ ಮತ್ತು ಜಯಂತ ಕುಮಾರ್, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಅನಿಷಾ ಕೌಸರ್ ಸ್ವಾಗತಿಸಿದರು. ವಿದ್ಯಾರ್ಥಿನಿ ಬುಶ್ರಾ ಗಣ್ಯರ ಪರಿಚಯವನ್ನು ಮಾಡಿದರು. ವಿದ್ಯಾರ್ಥಿನಿ ಆಯಿಷಾ ಅಸೀಲ್ ವಂದಿಸಿದರು. ವಿದ್ಯಾರ್ಥಿನಿ ಅಫ್ರಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News