ವಂ| ಡೆನಿಸ್ ಡೆಸಾ ಅವರ ಹುಟ್ಟು ಹಬ್ಬದ ವಜ್ರಮಹೋತ್ಸವ ಸಂಭ್ರಮ

Update: 2024-09-20 15:50 GMT

ಉಡುಪಿ, ಸೆ.20: ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಪ್ರಧಾನ ಧರ್ಮಗುರು ವಂ.ಡೆನಿಸ್ ಡೆಸಾ ಅವರ 60ನೇ ವರ್ಷದ ಹುಟ್ಟು ಹಬ್ಬದ ವಜ್ರಮಹೋತ್ಸವ ಸಂಭ್ರಮ ಶುಕ್ರವಾರ ಜರಗಿತು.

ದೇವರು ತನಗೆ ನೀಡಿದ ಜೀವನಕ್ಕಾಗಿ ಕೃತಜ್ಞಾತಾ ಬಲಿಪೂಜೆಯನ್ನು ಧರ್ಮಗುರು ವಂ|ಡೆನಿಸ್ ಡೆಸಾ ಸಹ ಯಾಜಕರೊಂದಿಗೆ ಅರ್ಪಿಸಿದರು.

ಈ ವೇಳೆ ಪ್ರವಚನ ನೀಡಿದ ದೆರೆಬೈಲ್ ಚರ್ಚಿನ ಪ್ರಧಾನ ಧರ್ಮಗುರು ವಂ.ಜೊಸೇಫ್ ಮಾರ್ಟಿಸ್, ಜೀವನ ದೇವರು ನಮಗೆ ನೀಡಿರುವ ವರವಾಗಿದ್ದು, ಅದರೊಂದಿಗೆ ಸೇವೆ ಮತ್ತು ಜವಾಬ್ದಾರಿಯನ್ನು ಕೂಡ ನೀಡಿದೆ. ಸಮಾಜದಲ್ಲಿ ಸರ್ವ ರೊಂದಿಗೆ ಬೆರೆತು ನಮ್ಮ ಜೀವನವನ್ನು ಪರರ ಒಳಿತಿಗಾಗಿ ಉಪಯೋಗಿಸಿಕೊಂಡು ದೇವರ ವಾಕ್ಯದಂತೆ ಬದುಕಿದಾಗ ನಮ್ಮ ಜೀವನ ಸಾರ್ಥಕತೆಯನ್ನು ಕಾಣಲು ಸಾಧ್ಯವಿದೆ. ವಂ|ಡೆನಿಸ್ ಡೆಸಾ ತನ್ನ ಜೀವಿತಾವಧಿಯಲ್ಲಿ ಎಲ್ಲರೊಂದಿಗೆ ಬೆರೆತು ಯೇಸುವಿನ ನೈಜ ಸೇವಕರಾಗಿ ಸಮಾಜದಲ್ಲಿ ಕ್ರಾಂತಿಯನ್ನೇ ಮಾಡಿದ್ದಾರೆ ಎಂದರು.

ಬಲಿಪೂಜೆಯ ಬಳಿಕ ಕಿರು ಸನ್ಮಾನ ಕಾರ್ಯಕ್ರಮ ಚರ್ಚ್ ಆಡಳಿತ ಮಂಡಳಿಯಿಂದ ಜರುಗಿತು. ಧರ್ಮಪ್ರಾಂತ್ಯದ ಪರವಾಗಿ ಶ್ರೇಷ್ಠ ಗುರುಗಳು, ಸರ್ವಧರ್ಮಸಮಿತಿಯ ವತಿಯಿಂದ ಡೆನಿಸ್ ಡೆಸಾ ಅವರನ್ನು ಸಾರ್ವಜನಿಕವಾಗಿ ಸನ್ಮಾನಿಸಲಾಯಿತು.

ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ವಿವಿಧ ಚರ್ಚುಗಳ ಧರ್ಮ ಗುರುಗಳಾದ ವಂ|ಫ್ರೆಡ್ ಮಸ್ಕರೇನ್ಹಸ್ ಬೆಳ್ಮಣ್, ವಂ| ಕ್ಲೇಮಂಟ್ ಮಸ್ಕರೇನ್ಹಸ್ ಕಾರ್ಕಳ, ಉಜ್ವಾಡ್ ಪತ್ರಿಕೆಯ ಸಂಪಾದಕರಾದ ವಂ|ಆಲ್ವಿನ್ ಸಿಕ್ವೇರಾ, ವಂ|ಅಶ್ವಿನ್ ಆರಾನ್ಹಾ, ವಂ |ಜಿತೇಶ್ ಕ್ಯಾಸ್ತಲಿನೋ, ವಂ|ವಿಕಾಸ್, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಸುನೀಲ್ ಫೆರ್ನಾಂಡಿಸ್, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಚಾಲಕರಾದ ವನೀತಾ ಫೆರ್ನಾಂಡಿಸ್, ತೊಟ್ಟಮ್ ಕಾನ್ವೆಂಟಿನ ಸುಪಿರೀಯರ್ ಸಿಸ್ಟರ್ ಸುಷ್ಮಾ ಉಪಸ್ಥೀತರಿದ್ದರು. ಲೆಸ್ಲಿ ಅರೋಝಾ ಕಾರ್ಯಕ್ರಮ ನಿರೂಪಿಸಿದರು.

ಬಡ ಕುಟುಂಬಕ್ಕೆ ಮನೆ ನಿರ್ಮಾಣ

ಹುಟ್ಟು ಹಬ್ಬದ ಪ್ರಯುಕ್ತ ಅದ್ದೂರಿ ಆಚರಣೆಯ ಬದಲಾಗಿ ಚರ್ಚಿನ ವ್ಯಾಪ್ತಿಯಲ್ಲಿರುವ ಒಂದು ಬಡ ಕುಟುಂಬಕ್ಕೆ ಸುಸಜ್ಜಿತ ಮನೆಯೊಂದನ್ನು ನಿರ್ಮಿಸಲು ವಂ|ಡೆನಿಸ್ ಡೆಸಾ ಮನವಿ ಮಾಡಿದರು. ಮನವಿಗೆ ಚರ್ಚಿನ ಸದಸ್ಯರು ಸಹಮತ ವ್ಯಕ್ತ ಪಡಿಸಿ ಮುಂದಿನ 3 ತಿಂಗಳ ಒಳಗಡೆ ಮನೆಯನ್ನು ನಿರ್ಮಿಸುವುದಕ್ಕೆ ಒಪ್ಪಿಗೆ ಸೂಚಿಸಲಾಯಿತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News