ಕಟ್ಟಡ ಸಹಾಯಾರ್ಥ ನಾಟಕ ಪ್ರದರ್ಶನ ಉದ್ಘಾಟನೆ
Update: 2024-10-01 13:27 GMT
ಉಡುಪಿ, ಅ.1: ಅಂಬಲಪಾಡಿ ಶ್ರೀವಿರಾಡ್ವಿಶ್ವಕರ್ಮ ಬ್ರಾಹ್ಮಣ ಶಿಲ್ಪ ಕಲಾ ಸಂಘದ ಕಟ್ಟಡದ ಸಹಾಯಾರ್ಥ ಏರ್ಲಾ ಗ್ಯಾರಂಟಿ ಅತ್ತ್ ಎಂಬ ನಾಟಕ ಪ್ರದರ್ಶನವನ್ನು ಉಡುಪಿ ಪುರಭವನದಲ್ಲಿ ಆಯೋಜಿಸಲಾಗಿತ್ತು.
ಪ್ರದರ್ಶನವನ್ನು ಅಂಬಲಪಾಡಿ ಶ್ರೀಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ನಿ.ಬೀ.ವಿಜಯ ಬಲ್ಲಾಳ್ ಉದ್ಘಾಟಿಸಿ, ಶುಭ ಹಾರೈಸಿದರು. ಚಾಪರ್ಕ ತಂಡದ ದೇವದಾಸ್ ಕಾಪಿಕಾಡ್ ಅವರನ್ನು ಗೌರವಿಸ ಲಾಯಿತು.
ದೋಹಾ ಕತಾರ್‌ನ ಸ್ವರ್ಣೋದ್ಯಮಿ ಕೆ.ವಿಶ್ವನಾಥ ರಾವ್ ನೇಜಾರ್, ಸಂಘದ ಗೌರವಾಧ್ಯಕ್ಷ ಮೊಕ್ತೇಸರ ವ್ಯಾಸರಾಯ ಆಚಾರ್ಯ ಅಂಬಲಪಾಡಿ, ಶ್ರೀಕಾಳಿಕಾ ಮಹಿಳಾ ಮಂಡಳಿ ಅಧ್ಯಕ್ಷೆ ವಿಲಾಸಿನಿ ಎಸ್.ಆಚಾರ್ಯ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಜಗದೀಶ ಆಚಾರ್ಯ ಕಪ್ಪೆಟ್ಟು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಹರೀಶ್ ಆಚಾರ್ಯ ಅಂಬಲಪಾಡಿ, ಕೋಶಾಧಿಕಾರಿ ವಿಶ್ವನಾಥ ಆಚಾರ್ಯ ಕಿದಿಯೂರು ಸಹಕರಿಸಿದರು. ಸ್ವಾತಿ ಕೆ.ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.