ಗಾಂಧಿವಾದಿ ನೈತಿಕ ಮೌಲ್ಯಗಳನ್ನು ಅನುಕರಿಸುವುದು ಅಗತ್ಯ: ಕೆ.ಪಿ.ರಾವ್

Update: 2024-10-03 13:08 GMT

ಮಣಿಪಾಲ, ಅ.3: ಸಮಕಾಲೀನ ಜಗತ್ತಿನಲ್ಲಿ ಗಾಂಧಿವಾದಿ ನೈತಿಕ ಮೌಲ್ಯಗಳನ್ನು ಅನುಕರಿಸುವ ಅಗತ್ಯವಿದೆ ಎಂದು ವಿದ್ವಾಂಸ, ಕಂಪ್ಯೂಟೇಶನಲ್ ಭಾಷಾಶಾಸ್ತ್ರಜ್ಞ ನಾಡೋಜ ಪ್ರೊ.ಕೆ.ಪಿ.ರಾವ್ ಹೇಳಿದ್ದಾರೆ.

ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಯಾವುದು ಒಳ್ಳೆಯದು, ಅದನ್ನು ಮುಂದುವರೆಸಿಕೊಂಡು ಹೋಗಬೇಕು ಮತ್ತು ಪ್ರಸ್ತುತ ಜಗತ್ತಿನಲ್ಲಿ ಗಾಂಧಿಯ ನೈತಿಕತೆಯು ಸಂಕೇತವಾಗಿ ಮಹತ್ವದ್ದಾಗಿದೆ. ಬದುಕಿದ ಜಗತ್ತಿನಲ್ಲಿ ಸೃಷ್ಟಿಸಲು ಪ್ರಯತ್ನಿಸಿದ ನೈತಿಕ ಜಗತ್ತಿನಲ್ಲಿ ಅವರ ಮೂಲಭೂತ ನಂಬಿಕೆಗಳು ಅಡಕವಾಗಿದೆ ಎಂದು ಅವರು ಹೇಳಿದರು.

ರಾಯಚೂರಿನ ಕೃಷಿ ವಿಶ್ವವಿದ್ಯಾನಿಲಯದ ನಿವೃತ್ತಿ ಕುಲಪತಿ ಪ್ರೊ.ಎಂ.ಕೆ. ನಾಯ್ಕ್, ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ ದರು. ಡಾ.ಭ್ರಮರಿ ಶಿವಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News