ಕಷ್ಟದಲ್ಲಿ ಬದುಕಿದ ಮಹಿಳೆಯರು ಎಂದೆಂದಿಗೂ ಗಟ್ಟಿ: ವೈದೇಹಿ
Update: 2024-10-07 12:06 GMT
ಉಡುಪಿ: ಕಷ್ಟಕಾರ್ಪಣ್ಯಗಳಲ್ಲಿ ಬದುಕನ್ನು ನಿರ್ವಹಿಸಿದ ಬಹುತೇಕ ಮಹಿಳೆಯರು ಗಟ್ಟಿಯಾಗಿ ಇದ್ದು ಬದುಕನ್ನು ಗೆಲ್ಲುತ್ತಾರೆ ಎಂದು ಹಿರಿಯ ಸಾಹಿತಿ ವೈದೇಹಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ವೈದೇಹಿ ಅಭಿಮಾನಿಗಳ ಸೌಜನ್ಯ ಭೇಟಿಯ ಸಮಯದಲ್ಲಿ ಅವರು ಮಾತನಾಡುತಿದ್ದರು. ಪಾತ್ರಗಳು ಗಟ್ಟಿಯಾಗಿ ಉಳಿಯಲು ಬದುಕಿನ ಸವಾಲುಗಳು ಸಹಾಯ ಮಾಡುತ್ತವೆ ಎಂದರು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ವಾಣಿಜ್ಯ ತೆರಿಗೆ ಇಲಾಖೆಯ ಉಪಯುಕ್ತ ಸಂಗಪ್ಪ ಕೋಳಿ ಮತ್ತು ಉಡುಪಿ ಜಿಲ್ಲೆಯ ವಾಣಿಜ್ಯ ತೆರಿಗೆ ಉಪಯುಕ್ತ ಹೊಳೆಯಪ್ಪ ಮತ್ತು ಅಧಿಕಾರಿ ಕಾರ್ತಿಕ್ ದರ್ಶನ್, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಉಪಸ್ಥಿತರಿದ್ದರು.