ಕೋಡಿ| ಬ್ಯಾರೀಸ್ ಕಾಲೇಜಿನಲ್ಲಿ “ಯುವಶಕ್ತಿ ಹಾಗೂ ನಾಯಕತ್ವ” ವಿಶೇಷ ಉಪನ್ಯಾಸ ಕಾರ್ಯಕ್ರಮ

Update: 2024-10-07 13:05 GMT

ಕೋಡಿ: ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಕೋಡಿ ಇದರ ರಾಷ್ಟ್ರೀಯ ಸೇವಾ ಯೋಜನೆ ಘಟಕ "ಯುವಶಕ್ತಿ ಮತ್ತು ನಾಯಕತ್ವ" ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಹಮ್ಮಿಕೊಂಡಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಲೇಖಕರೂ, ತಾಳಮದ್ದಲೆ ಅರ್ಥದಾರಿಗಳಾದ ಮುಸ್ತಾಕ್ ಹೆನ್ನಾಬೈಲು ಮಾತನಾಡಿ, "ಈ ಜಗತ್ತಿನಲ್ಲಿ ಸರ್ವರೂ ಪ್ರತಿಭಾನ್ವಿತರೇ ಆಗಿ ಜನ್ಮ ತಳೆದರೂ ತಮ್ಮೊಳಗಿನ ಅಂತಸ್ತವಾಗಿರುವ ಪ್ರತಿಭೆ ಯನ್ನು ಹುಡುಕುಲ್ಲಿ ಅಸಮರ್ಥರಾಗುತ್ತೇವೆ, ಶಿಕ್ಷಣ ಪಡೆಯುವುದರಿಂದ ನಾಯಕರ ಸೃಷ್ಟಿಯಾಗದು. ಆದರೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಅಸಂಖ್ಯಾತ ಯುವನಾಯಕರನ್ನು ಹುಟ್ಟು ಹಾಕಬಲ್ಲದು” ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಬ್ಯಾರೀಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಶಬೀನಾ. ಹೆಚ್ ಇವರು “ಇಂತಹ ವೇದಿಕೆಗಳು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಮೂಡಿಸುವುದರೊಂದಿಗೆ ನಾಯಕತ್ವದ ಗುಣದೊಂದಿಗೆ ವ್ಯಕ್ತಿತ್ವ ವಿಕಸನವನ್ನು ಬೆಳೆಸುತ್ತದೆ” ಎಂದು ಮಾತನಾಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ನೂತನ್ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿ ಮುಖಂಡ ಮೊಹಮ್ಮದ್ ನಿಹಾಲ್ ತೃತೀಯ ಬಿಸಿಎ ಪ್ರಾಸ್ತಾವಿಕವಾಗಿ ನುಡಿದರು. ವಿದ್ಯಾರ್ಥಿಗಳಾದ ನಿಸಾರ್, ಮುಝಮ್ಮಿಲ್, ಮಿಫ್ರಾ, ಫಾಯಿಝ ರಾಷ್ಟ್ರೀಯ ಸೇವಾ ಯೋಜನೆ ಗೀತೆ ಮತ್ತು ಭಾವೈಕ್ಯತೆ ಗೀತೆ ಹಾಡಿದರು. ಶೈಮಾ ವಂದಿಸಿ, ಮುಝಮ್ಮಿಲ್ ಸ್ವಾಗತಿಸಿದರು, ಬುಶ್ರಾ ಕಾರ್ಯಕ್ರಮ ನಿರೂಪಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News