ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ದಿನಕರ ಹೇರೂರು ಅಧಿಕಾರ ಸ್ವೀಕಾರ
ಉಡುಪಿ: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಮಾಜಿ ತಾಪಂ ಸದಸ್ಯ ದಿನಕರ ಹೇರೂರು ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಆದಿಉಡುಪಿಯಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರ ಉಪಸ್ಥಿತಿಯಲ್ಲಿ ಅವರು ಅಧಿಕಾರ ಸ್ವೀಕಾರ ಮಾಡಿದರು.
ಇವರೊಂದಿಗೆ ಸದಸ್ಯರಾಗಿ ಜ್ಯೋತಿ ಹೆಬ್ಬಾರ್ ಲಕ್ಷ್ಮೀಂದ್ರನಗರ, ಸತೀಶ್‌ಕುಮಾರ್ ಮಂಚಿಕೋಡಿ, ಡೇನಿ ವಿಲಿಯಂ ಲಾರೆನ್ಸ್ ಪಿಂಟೊ (ಆರ್ಕಿಟೆಕ್ಟ್) ಬ್ರಹ್ಮಗಿರಿ, ದಿಲೀಪ್ ಹೆಗ್ಡೆ ಕುಕ್ಕೆಹಳ್ಳಿ ಹಾಗೂ ಗಿರೀಶ್‌ಕುಮಾರ್ ಉದ್ಯಾವರ ನೇಮಕ ಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್‌ನ ಹಿರಿಯ ನಾಯಕರಾದ ಎಂ.ಎ. ಗಫೂರ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ನರಸಿಂಹ ಮೂರ್ತಿ, ಪ್ರಸಾದ್‌ರಾಜ್ ಕಾಂಚನ್, ಅಣ್ಣಯ್ಯ ಶೇರಿಗಾರ್, ರಮೇಶ್ ಕಾಂಚನ್, ಜನಾರ್ದನ್ ತೋನ್ಸೆ, ಭಾಸ್ಕರರಾವ್ ಕಿದಿಯೂರು, ದಿನೇಶ್ ಪುತ್ರನ್,ದಿವಾಕರ ಕುಂದರ್, ಹರೀಶ್ ಕಿಣಿ ಅಲೆವೂರು, ಪ್ರಖ್ಯಾತ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಗೀತಾ ವಾಗ್ಳೆ, ವೆರೋನಿಕಾ ಕರ್ನೇಲಿಯೊ, ಡಾ.ಸುನೀತಾ ಶೆಟ್ಟಿ, ಲಕ್ಷ್ಮೀ ಭಟ್, ಮಮತಾ ಶೆಟ್ಟಿ, ಐರಿನ್ ಅಂದ್ರಾದೆ, ಕೇಶವ್ ಕುಂದರ್, ಯತೀಶ್ ಕರ್ಕೇರ, ಮೈರ್ಮಾಡಿ ಸುಧಾಕರ ಶೆಟ್ಟಿ, ಯುವರಾಜ್ ಮುಂತಾದವರು ಉಪಸ್ಥಿತರಿದ್ದರು.