ಮಣಿಪಾಲ: ಅ.ಭಾರತ ಅಂತರ ವಿವಿ ಮಹಿಳಾ ಟೂರ್ನಿ

Update: 2024-12-14 16:15 GMT

ಉಡುಪಿ, ಡಿ.14: ದಕ್ಷಿಣ ವಲಯ ಚಾಂಪಿಯನ್ ಹೈದರಾಬಾದ್‌ನ ಉಸ್ಮಾನಿಯಾ ವಿವಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಆಶ್ರಯದಲ್ಲಿ ನಡೆದಿರುವ ಅಖಿಲ ಭಾರತ ಅಂತರ ವಲಯ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಟೆನಿಸ್ ಟೂರ್ನಿಯಲ್ಲಿ ಸತತ ಎರಡನೇ ಜಯ ದಾಖಲಿಸಿದೆ.

ನಿನ್ನೆ ಪುಣೆಯ ಸಾವಿತ್ರಿಬಾಯಿ ಫುಲೆ ವಿವಿಯನ್ನು ಸೋಲಿಸಿದ್ದ ಉಸ್ಮಾನಿಯಾ ವಿವಿ ಇಂದು ರವಿಶಂಕರ್ ವಿವಿಯನ್ನು ಸಹ 2-0 ಅಂತರದಿಂದ ಪರಾಭವಗೊಳಿಸಿತು. ದಕ್ಷಿಣ ವಲಯವನ್ನು ಪ್ರತಿನಿದಿಸುತ್ತಿರುವ ಮತ್ತೊಂದು ತಂಡವಾದ ಮದರಾಸು ವಿವಿ, ಗುಜರಾತ್ ವಿವಿಯನ್ನು 2-0 ಅಂತರದಿಂದ ಸೋಲಿಸಿತು.

ರೋಹ್ಟಕ್‌ನ ಮಹರ್ಷಿ ದಯಾನಂದ ವಿವಿ ಸಹ ಸತತ ಎರಡನೇ ಜಯ ದಾಖಲಿಸಿದೆ. ನಿನ್ನೆ ಅಣ್ಣಾ ವಿವಿಯನ್ನು ಸೋಲಿಸಿದ್ದ ದಯಾನಂದ ವಿವಿ ಇಂದು ಪಿಎಎಚ್ ಸೋಲಾಪುರವನ್ನು 2-1 ಪಂದ್ಯಗಳ ಅಂತರದಿಂದ ಹಿಮ್ಮೆಟ್ಟಿಸಿತು.

ದಿನದ ಉಳಿದೆರಡು ಪಂದ್ಯಗಳಲ್ಲಿ ಎಸ್‌ಆರ್‌ಎಂ ವಿವಿ, ದಿಲ್ಲಿ ವಿವಿಯನ್ನು 2-0 ಅಂತರದಿಂದ ಹಾಗೂ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಐಟಿ, ಪಂಜಾಬ್ ವಿವಿಯನ್ನು 2-0 ಗೇಮ್‌ಗಳ ಅಂತರದಿಂದ ಸೋಲಿಸಿದವು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News