ಕೇಂದ್ರ ಸರಕಾರದ ನೀತಿಗಳಿಂದ ಕಾರ್ಮಿಕರ ಶೋಷಣೆ: ಚಂದ್ರಶೇಖರ್

Update: 2024-12-23 13:54 GMT

ಕುಂದಾಪುರ: ಕೇಂದ್ರ ಸರಕಾರ ಶ್ರೀಮಂತ ಉದ್ದಿಮೆದಾರರ ಪರವಾದ ನೀತಿಗಳು ಕಾರ್ಮಿಕರ ಶೋಷಣೆಯನ್ನು ಹೆಚ್ಚಿಸು ವುದಾಗಿದೆ. ಕಾರ್ಮಿಕ ವರ್ಗಕ್ಕೆ ಮಾರಕವಾದ ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯನ್ನು ಕೇಂದ್ರ ಸರಕಾರ ಕೈ ಬಿಡಬೇಕು ಎಂದು ಸಿಐಟಿಯು ಕುಂದಾಪುರ ತಾಲೂಕು ಸಂಚಾಲಕ ಚಂದ್ರಶೇಖರ್ ವಿ. ಆಗ್ರಹಿಸಿದ್ದಾರೆ.

ಕುಂದಾಪುರ ಹಂಚು ಕಾರ್ಮಿಕ ಸಂಘದಲ್ಲಿ ನಡೆದ ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘದ ವಾರ್ಷಿಕ ಮಹಾಸಭೆ ಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಕಿರು ಕೈಗಾರಿಕೆಗಳಿಗೆ ಯಾವುದೇ ರಕ್ಷಣೆ ಇಲ್ಲವಾಗಿದೆ. ಅದನ್ನೇ ಅವಲಂಬಿಸಿದ ಕಾರ್ಮಿಕರು ಬೀದಿಗೆ ಬೀಳುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿರುವ ಹಂಚು ಕಾರ್ಖಾನೆಗಳು ಇಂದು ಮಾರುಕಟ್ಟೆ ಸಮಸ್ಯೆಯಿಂದ ಬಳಲುತ್ತಿದ್ದು ಕಚ್ಚಾ ಸಾಮಾಗ್ರಿ ದೊರಕುತ್ತಿಲ್ಲ. ಈ ಸಂದರ್ಭದಲ್ಲಿ ಸರಕಾರ ಉದ್ದಿಮೆ ರಕ್ಷಣೆಗೆ ದಾವಿಸಬೇಕಾಗಿದೆ. ಗಣಿಗಾರಿಕೆ ಸಮಸ್ಯೆ ಉದ್ದಿಮೆಗೆ ಮಾರಕವಾಗಿದೆ ಎಂದರು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಹಾಗೂ ಮಾಜಿ ಪುರಸಭಾ ಅಧ್ಯಕ್ಷ ವಿ.ನರಸಿಂಹ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎಚ್.ನರಸಿಂಹ ಮಂಡಿಸಿದ ವಾರ್ಷಿಕ ಕರಡು ವರದಿ ಹಾಗೂ ಲೆಕ್ಕಪತ್ರವನ್ನು ಚರ್ಚೆಯ ನಂತರ ಅಂಗೀಕರಿಸಲಾಯಿತು.

ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ಖಾಯಂ ವೈದ್ಯರ ನೇಮಕಾತಿ ಹಾಗು ಬ್ರಹ್ಮಾವರ 100 ಹಾಸಿಗೆಗಳ ಆಸ್ಪತ್ರೆಯ ಶೀಘ್ರ ತೆರೆಯಲು ಒತ್ತಾಯಿಸಿ, ಬೆಲೆ ಏರಿಕೆ ವಿರುದ್ಧ, ಪಿಂಚಣಿ ಹೆಚ್ಚಳಕ್ಕೆ ಆಗ್ರಹಿಸಿ, ಆವೆ ಮಣ್ಣಿನ ಸರಬರಾಜಿಗೆ ಇರುವ ಆಕ್ಷೇಪ ಹಿಂಪಡೆಯಲು ಒತ್ತಾಯಿಸಿ ನಿರ್ಣಯ ಅಂಗೀಕರಿಸ ಲಾಯಿತು.

ನೂತನ ಅಧ್ಯಕ್ಷರಾಗಿ ವಿ.ನರಸಿಂಹ ಪುನರಾಯ್ಕೆಯಾದರು. ಪ್ರಧಾನ ಕಾರ್ಯ ದರ್ಶಿಯಾಗಿ ಎಚ್.ನರಸಿಂಹ, ಕೋಶಾಧಿ ಕಾರಿಯಾಗಿ ಪ್ರಕಾಶ್ ಕೋಣಿ ಆಯ್ಕೆ ಯಾದರು. ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್, ಬೀಡಿ ಕಾರ್ಮಿಕ ಸಂಘದ ಮುಖಂಡ ಮಹಾಬಲ ವಡೇರಹೋಬಳಿ ಮಾತನಾಡಿದರು. ವೇದಿಕೆಯಲ್ಲಿ ಸಿಐಟಿಯು ಮುಖಂಡ ಬಲ್ಕಿಸ್ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಸುರೇಂದ್ರ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News