ಸ್ತ್ರೀಯರನ್ನು ಗೌರವಿಸುವುದು ಭಾರತೀಯ ಸಂಸ್ಕೃತಿ: ಇಮ್ಮಡಿ ಸಿದ್ಧಲಿಂಗೇಶ್ವರ ಸ್ವಾಮಿ
ಕಾರ್ಕಳ : ಸ್ತ್ರೀಯರಿಗೆ ಗೌರವಿಸುವುದು ಭಾರತೀಯ ಸಂಸ್ಕೃತಿ. ಸ್ತ್ರೀ ಕುಲಕ್ಕೆ ಗೌರವ ನೀಡದ ಕಸಗಳನ್ನು ಕಿತ್ತು ಬಿಸಾಡುವ ಕೆಲಸ ಸರಕಾರದಿಂದ ಅಗಬೇಕಾಗಿದೆ ಎಂದು ಚಿತ್ರದುರ್ಗದ ಬೋವಿ ಸಮಾಜದ ಇಮ್ಮಡಿ ಸಿದ್ಧಲಿಂಗೇಶ್ವರ ಸ್ವಾಮೀಜಿ ಹೇಳಿದರು.
ಅವರು ಕಾರ್ಕಳದ ಮಂಜುನಾಥ ಪೈ ಸಭಾಂಗಣದಲ್ಲಿ ಹಿಂದು ಹಿತರಕ್ಷಣಾ ಸಮಿತಿ ವತಿಯಿಂದ ನಡೆದ ಖಂಡನಾ ಸಭೆಯಲ್ಲಿ ಮಾತನಾಡಿದರು.
ಮಾಜಿ ಸಚಿವ ಸುನಿಲ್ ಕುಮಾರ್ ಮಾತನಾಡಿ ನಿರ್ಭಯ, ಕೇರಳ ಲವ್ ಜಿಹಾದ್, ಹುಬ್ಬಳ್ಳಿ ಸ್ನೇಹ ಕೊಲೆ ಪ್ರಕರಣ, ಬಾಂಗ್ಲಾದೇಶದ ಘಟನೆಗಳನ್ನು ಖಂಡಿಸುವ ಹೊತ್ತಿನಲ್ಲೆ ಕಾರ್ಕಳದಲ್ಲೆ ಕೃತ್ಯ ನಡೆದು ಹೋಗಿದೆ. ಸರಕಾರದ ಓಲೈಕೆ ಹಾಗೂ ಮೃದು ಧೋರಣೆಗಳಿರುವವರೆಗೆ ಇಂತಹ ಕೃತ್ಯಗಳು ನಡೆಯುತ್ತಿರುತ್ತವೆ. ಮೊನ್ನೆಯ ದುಸ್ಕೃತ್ಯದಿಂದಾಗಿ ಕಾರ್ಕಳದ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದರು.
ವಿಶ್ವ ಹಿಂದೂ ಪರಿಷತ್ ಪ್ರಾಂತೀಯ ಸಂಚಾಲಕ ಸುನೀಲ್ ಕೆ ಆರ್ ಪ್ರಾಸ್ತಾವಿಕ ಮಾತನಾಡಿದರು.
ವಿಶ್ರಾಂತ ಪ್ರಾಂಶುಪಾಲೆ ಮಿತ್ರ ಪ್ರಭಾ ಹೆಗ್ಡೆ , ಉದ್ಯಮಿ ಮಹೇಶ್ ಶೆಟ್ಟಿ ಕುಡುಪುಲಾಜೆ, ಮುನಿಯಪ್ಪ ದೊಡ್ಡ ಹಳ್ಳಿ, ಶಂಕರ ಕೋಟ ಉಪಸ್ಥಿತರಿದ್ದರು. ಮನೀಶ್ ಶೆಟ್ಟಿ ಸ್ವಾಗತಿಸಿದರು.
ಸಭೆಯ ಮೊದಲು ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಕಾರ್ಕಳ ಅನಂತ ಶಯನದಿಂದ ಬಸ್ನಿಲ್ದಾಣ, ವೆಂಕಟರಮಣ ದೇವಾಲಯ ಮಾರ್ಗವಾಗಿ ಮಂಜುನಾಥ ಪೈ ಸಭಾಂಗಣದ ವರೆಗೆ ರ್ಯಾಲಿ ನಡೆಯಿತು.