ಮಣಿಪಾಲದಲ್ಲಿ ಮುಂದಿನ ಮೂರು ತಿಂಗಳಲ್ಲಿ ರೊಬೋಟಿಕ್ ಸರ್ಜರಿ : ಡಾ ಸುದರ್ಶನ್ ಬಲ್ಲಾಳ್

Update: 2024-04-29 06:38 GMT

ಕಾರ್ಕಳ: ಮುಂದಿನ ಮೂರು ತಿಂಗಳಲ್ಲಿ ಮಣಿಪಾಲದಲ್ಲಿ ರೊಬೋಟಿಕ್ ಸರ್ಜರಿ ಆರಂಭವಾಗಲಿದೆ ಎಂದು ಮಣಿಪಾಲ ಸಮೂಹ ಆಸ್ಪತ್ರೆಗಳ ಮುಖ್ಯಸ್ಥರಾದ ಡಾ ಸುದರ್ಶನ್ ಬಲ್ಲಾಳ್ ತಿಳಿಸಿದ್ದಾರೆ.

ಕಾರ್ಕಳದ ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಯಲ್ಲಿ ಕಾರ್ಕಳದ ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಹಾಗೂ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಇದರ ಆಶ್ರಯದಲ್ಲಿ ನಡೆದ ಬೆಂಗಳೂರಿನ ಖ್ಯಾತ ಮೂತ್ರಪಿಂಡ ಡಾ ಸುದರ್ಶನ್ ಬಲ್ಲಾಳ್ ಇವರಿಂದ ಮಾಧ್ಯಮದವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಮೂತ್ರಪಿಂಡ ಕಾಯಿಲೆ, ಲಕ್ಷಣಗಳು ಹಾಗೂ ಎಚ್ಚರಿಕೆ ಚಿಹ್ನೆಗಳು ಯಾವುವು, ರೋಗವನ್ನು ನಿರ್ವಹಿಸುವಲ್ಲಿ ಆರಂಭಿಕ ಪತ್ತೆ ಎಷ್ಟು ಮುಖ್ಯ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಸಾಮಾನ್ಯ ಆರೋಗ್ಯ ಸಮಸ್ಯೆಗೆ ಮತ್ತು ಮೂತ್ರಪಿಂಡ ಕಾಯಿಲೆಗೆ ಹೇಗೆ ಸಂಬಂಧ, ಈ ರೋಗವು ಮುಂದುವರೆದಂತೆ ಹೆಚ್ಚಾಗಿ ಎದುರಿಸುವ ಪ್ರಮುಖ ತೊಡಕು, ಸಮಸ್ಯೆ, ಮೂತ್ರಪಿಂಡ ಕಾಯಿಲೆಯನ್ನು ನಿರ್ವಹಿಸುವಲ್ಲಿ ಆಹಾರವು ಯಾವ ಪಾತ್ರವನ್ನು ವಹಿಸುತ್ತದೆ, ರೋಗಿಗಳು ಅನುಸರಿಸಬೇಕಾದ ನಿರ್ದಿಷ್ಟ ಆಹಾರ ಮಾರ್ಗಸೂಚಿಗಳು, ಇತರ ಕಾಯಿಲೆಯ ಔಷಧಿಗಳು ಮೂತ್ರಪಿಂಡ ತೊಂದರೆಗೆ ಕಾರಣ, ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗೆ ಲಭ್ಯವಿರುವ ವಿವಿಧ ಚಿಕಿತ್ಸಾ ಆಯ್ಕೆ, ಮೂತ್ರಪಿಂಡ ಕಸಿ, ಕಿಡ್ನಿ ತೊಂದರೆಗೆ ಪರಿಹಾರ, ಕಿಡ್ನಿ ಕಸಿ ನಂತರ ಡಯಾಲಿಸಿಸ್ ನ ಅವಶ್ಯಕತೆ, ಮೂತ್ರಪಿಂಡ ದಾನ, ದಾನದ ನಂತರ ದಾನಿಗಳು ವಹಿಸಬೇಕಾದ ಮುಂಜಾಗರೂಕತಾ ಕ್ರಮಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ ಸಹ ಕುಲಾಧಿಪತಿ ಹೆಚ್ ಎಸ್ ಬಲ್ಲಾಳ್, ಡಾ ಟಿ ಎಂ ಎ ಪೈ ರೋ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ ಕೀರ್ತಿನಾಥ ಬಲ್ಲಾಳ್, ಮಾಹೆ ಉಪಕುಲಪತಿ ಡಾ ಎಂ ಡಿ ವೆಂಕಟೇಶ್, ವ್ಯವಸ್ಥಾಪಕ ಮೋಹನ್ ಶೆಟ್ಟಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News