ಶಿಕ್ಷಣ ಸಚಿವ ಮಧು ಬಂಗಾರಪ್ಪ ಭೇಟಿ ಮಾಡಿದ ಎಸ್ ಡಿ ಎಂಸಿ ಸಮನ್ವಯ ಸಮಿತಿ ನಿಯೋಗ

Update: 2023-12-24 09:28 GMT

 ಕಾರ್ಕಳ: ಕರ್ನಾಟಕ ರಾಜ್ಯ ಎಸ್ ಡಿ ಎಂಸಿ ಸಮನ್ವಯ ಸಮಿತಿ ನಿಯೋಗದ ಪದಾಧಿಕಾರಿಗಳು  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧುಬಂಗಾರಪ್ಪಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧುಬಂಗಾರಪ್ಪ ಅವರನ್ನು ಕಾಂಗ್ರೆಸ್ ಕಚೇರಿಯಲ್ಲಿ ಭೇಟಿಯಾಗಿ ಪ್ರಸ್ತುತ ಸರಕಾರಿ ಶಾಲೆಯಲ್ಲಿ ಆಗುತ್ತಿರುವ ತೊಂದರೆಗಳು ಹಾಗೂ ಅದಕ್ಕೆ ಮಾಡಬೇಕಾದ ತುರ್ತು ಪರಿಹಾರದ ಬಗ್ಗೆ ಚರ್ಚಿಸಿ ಮನವಿಯನ್ನು ಸಲ್ಲಿಸಿದರು.

ಜೂನ್ ನಿಂದ ಡಿಸೆಂಬರ್ ವರೆಗಿನ ಈ ಶೈಕ್ಷಣಿಕ ವರ್ಷದಲ್ಲಿ ಸರಕಾರಿ ಶಾಲೆಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ, ಶಾಲಾ ಶಿಕ್ಷಕರನ್ನು ಬಿಟ್ಟು ಬೇರೆ ಶಾಲೆಗಳಿಂದ ಶಿಕ್ಷಕರ ಸಂಘದ ಪದಾಧಿಕಾರಿಗಳು ಅತಿಥಿಗಳಾಗಿ ಭಾಗವಹಿಸಿದ್ದು ಮಾತ್ರವಲ್ಲದೆ ಸರಕಾರದ ಆದೇಶವನ್ನು ಉಲ್ಲಂಘಿಸಿ ಸನ್ಮಾನವನ್ನು ಕೂಡ ಮಾಡುತ್ತಿರುವುದಾಗಿ ಎಸ್ ಡಿ ಎಂಸಿ ಸಮನ್ವಯ ಸಮಿತಿ ಸಚಿವರಿಗೆ ದೂರು ನೀಡಿತು.

ಜಿಲ್ಲೆಯ ಸುಮಾರು 900 ರಷ್ಟು ಸರಕಾರಿ ಪ್ರಾಥಮಿಕ ಹಿರಿಯ ಹಾಗೂ ಕಿರಿಯ ಶಾಲೆಗಳಲ್ಲಿ 100 ರಷ್ಟು ಶಾಲೆಗಳಲ್ಲಿ ಶಿಕ್ಷಕರ ಹೆಸರಲ್ಲಿ ಇರುವ ಹಲವು ಹೆಸರಿನ ಸಂಘಗಳ ಪದಾಧಿಕಾರಿಗಳು ಶಿಕ್ಷಕರಾಗಿ ಇದ್ದು, ಇವರು ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಲ್ಲಿ ಹಾಗೂ ಖಾಸಗಿ ಶಾಲೆಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಶಾಲಾ ಸಮಯದಲ್ಲಿ ಅತಿಥಿಗಳಾಗಿ ಭಾಗವಹಿಸುತ್ತಾ ಇದ್ದಾರೆ.

ಈ ಸಮಯದಲ್ಲಿ ಅವರು ಶಿಕ್ಷಕರಾಗಿರುವ ಶಾಲೆಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಕೆಲವು ಶಾಲೆಗಳಲ್ಲಿ ಸಂಘದ ಪದಾಧಿಕಾರಿಗಳು ಗೌರವ ಶಿಕ್ಷಕರನ್ನು ನೇಮಿಸಿ, ಇವರು ಸಹಿ ಹಾಕಲು ಮಾತ್ರ ಶಾಲೆಗೆ ಬರುವ ಬಗ್ಗೆ ಕೂಡ ಸಚಿವರಿಗೆ ತಿಳಿಸಲಾಯಿತು.

ಈ ನಿಯೋಗದಲ್ಲಿ ಕರ್ನಾಟಕ ರಾಜ್ಯ ಎಸ್ ಡಿ ಎಂಸಿ ಸಮನ್ವಯ ಸಮಿತಿಯ ಮೊಯ್ದಿನ್ ಕುಟ್ಟಿ, ರಮೇಶ್ ಶೆಟ್ಟಿ ಬೆಳ್ತಂಗಡಿ, ಸಾಜಸ್ ಕೈಕಂಬ, ಇಸ್ಮಾಯಿಲ್ ಮಾಣಿ,ಮಹಮ್ಮದ್ ಜಿ ಎಂ ಬನ್ನಂಗಳ ಹಾಗೂ ಸಿರಾಜ್ ಕುವೆಟ್ಟು ಇದ್ದರು

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News