ಶಿರ್ವ: ಮನೆಗೆ ನುಗ್ಗಿ ಸೊತ್ತು ಕಳವು
Update: 2023-10-21 16:02 GMT
ಶಿರ್ವ, ಅ.21: ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತು ಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.
ಅ.13ರಿಂದ ಅ.19ರ ಮಧ್ಯಾವಧಿಯಲ್ಲಿ ಸೈದಾ ಎಂಬವರ ಬಾಡಿಗೆ ಮನೆಯ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು, ಕಪಾಟಿನ ಒಳಗಡೆ ಬ್ಯಾಗಿನಲ್ಲಿಟ್ಟಿದ್ದ 98,000ರೂ. ಮೌಲ್ಯದ ಚಿನ್ನ, 16,700ರೂ. ನಗದು ಹಾಗೂ ಎಟಿಎಮ್ ಕಾರ್ಡು ಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.