’ಸ್ವಚ್ಛ ಕಡಲತೀರ -ಹಸಿರು ಕೋಡಿ’ ಅಭಿಯಾನದ ರಜತ ಸಂಭ್ರಮ
ಕುಂದಾಪುರ, ನ.1: ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ’ಸ್ವಚ್ಛ ಕಡಲತೀರ -ಹಸಿರು ಕೋಡಿ’ ಅಭಿಯಾನದ ರಜತ ಸಂಭ್ರಮ ಕನ್ನಡ ರಾಜ್ಯೋತ್ಸವ ದೊಂದಿಗೆ ವೈಭವದಿಂದ ಬುಧವಾರ ಜರಗಿತು.
ಅಧ್ಯಕ್ಷತೆ ವಹಿಸಿದ್ದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ.ಅಬ್ದುಲ್ ರೆಹಮಾನ್ ಮಾತನಾಡಿ, ಪ್ರತಿಯೊಬ್ಬ ಕನ್ನಡಿಗನೂ ಕರ್ನಾಟಕದ ನಾಡು-ನುಡಿ-ಜಲ ಸಂಸ್ಕ್ರತಿಯ ಅಭಿಮಾನವನ್ನು ಮೆರೆಯುತ್ತಾ ಮುಂದಿನ ಪೀಳಿಗೆಗೂ ಕೊಂಡೊಯ್ಯ ಬೇಕು ಎಂದು ಶುಭ ಹಾರೈಸಿದರು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸೈಯ್ಯದ್ ಮೊಹಮ್ಮದ್ ಬ್ಯಾರಿ ಅವರ ಸದಾಶಯದಂತೆ ಅಭಿಯಾನದ ರಜತ ಸಂಭ್ರಮ ಸಾಕಾರ ಗೊಂಡಿತು. ಸಮಾರಂಭದಲ್ಲಿ ಬ್ಯಾರೀಸ್ ವಿಶ್ವಸ್ಥ ಮಂಡಳಿ ಸದಸ್ಯರಾದ ಡಾ.ಆಸೀಫ್ ಬ್ಯಾರಿ, ಸಂಯೋಜಕರಾದ ಆಕಾಶ್ ಎಸ್., ಚಕ್ರೇಶ್ವರಿ ದೇವಳದ ಧರ್ಮದರ್ಶಿ ಗೋಪಾಲ ಪೂಜಾರಿ, ಕುಂದಾಪುರ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ರಫೀಕ್ ಬಿ.ಎಸ್.ಎಫ್., ನಾಗರಾಜ್ ಕಾಂಚನ್, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಕನ್ನಡ ಅನುದಾನಿತ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಜಯಶೀಲ ಶೆಟ್ಟಿ ವಂದಿಸಿ, ಕನ್ನಡ ಉಪನ್ಯಾಸಕ ಡಾ.ಸಂದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.