ಕೋಡಿ ಬ್ಯಾರೀಸ್ ಪದವಿ ಕಾಲೇಜಿನಲ್ಲಿ ‘ಸ್ವಚ್ಛತೆಯೇ ಸೇವೆ ಅಭಿಯಾನ – 2024ʼ

Update: 2024-09-30 18:31 GMT

ಉಡುಪಿ: ಕೋಡಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ(ರಿ), ಅಭಿಯೋಗ ಇಲಾಖೆ, ತಾಲೂಕು ಆಡಳಿತ ಮತ್ತು ಪುರಸಭೆ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ "ಸ್ವಚ್ಛತೆಯ ಸೇವೆ 2024" ಯಶಸ್ವಿಯಾಗಿ ನೆರವೇರಿತು.

ಕೋಡಿ ಸೀವಾಕ್ ನಲ್ಲಿ ಸಾಂಕೇತಿಕವಾಗಿ ಗಿಡ ನೆಡುವುದರೊಂದಿಗೆ ಅಬ್ದುಲ್ ರಹೀಮ್ ಹುಸೇನ್ ಶೇಕ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಗೌರವಾನ್ವಿತ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಕುಂದಾಪುರ ಇವರು "ಪರಿಸರ ಜೀವಿಯಾದ ಮಾನವನಿಂದ ನಿರ್ಮಲ ಪರಿಸರ ಹದಗೆಟ್ಟಿರುವುದು ನಿಜಕ್ಕೂ ನೋವಿನ ಸಂಗತಿ. ಈ ನೆಲೆಯಲ್ಲಿ ಯುವಶಕ್ತಿ ಸ್ವಚ್ಛ ಹೃದಯ ಮನಸ್ಸಿನೊಂದಿಗೆ ಸ್ವಚ್ಛ ಪರಿಸರವನ್ನು ನಿರ್ಮಿಸಿ ಉಳಿಸಿ ಬೆಳೆಸಬೇಕು" ಎಂದರು.

ಈ ಸ್ವಚ್ಛತಾ ಸೇವಾ ಅಭಿಯಾನದಲ್ಲಿ ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜು.ಏನ್, ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಮಂಜುಳಾ.ಬಿ, ಪುರಸಭೆ ಮುಖ್ಯಾಧಿಕಾರಿಗಳಾದ ಆನಂದ್. ಜಿ, ಬ್ಯಾರೀಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ಶಬೀನಾ. ಹೆಚ್, ಬ್ಯಾರೀಸ್ ಬಿ.ಎಡ್ ಪ್ರಾಂಶುಪಾಲ ಸಿದ್ದಪ್ಪ ಕೆ.ಎಸ್, ಬ್ಯಾರೀಸ್ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಸಂದೀಪ್ ಶೆಟ್ಟಿ ಹಾಗೂ ಶ್ರೀಮತಿ ನೂತನ್ ಮುಂತಾದವರು ಉಪಸ್ಥಿತರಿದ್ದರು. ನಂತರದಲ್ಲಿ ಜಂಟಿಯಾಗಿ ಸ್ವಚ್ಛತೆಯ ಸೇವೆ ಧ್ಯೆಯ ಮಂತ್ರದೊಂದಿಗೆ ಸ್ವಚ್ಛತೆಯ ಕಾರ್ಯವನ್ನು ಮಾಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News