ಬಿಲ್ಲವ ಸಮಾಜದ ಸಂಘಟನಾ ಶಕ್ತಿ ಬಲವಾಗಬೇಕು: ಅಶೋಕ್ ಪೂಜಾರಿ

Update: 2023-09-03 14:35 GMT

ಕುಂದಾಪುರ : ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ, ವ್ಯಕ್ತಿತ್ವನ್ನು ಮೈಗೂಡಿಸಿಕೊಂಡು ಸಮಾಜದ ಕೇಳಸ್ತರದವರೂ ಕೂಡ ಒಗ್ಗೂಡಿ ಸಂಘಟನೆ ಗಾಗಿ ಶ್ರಮಿಸಬೇಕು. ವಿದ್ಯೆ ಪಡೆಯುವ ಜೊತೆಗೆ, ರಾಜಕೀಯವಾಗಿ, ಆರ್ಥಿಕವಾಗಿ ಬಲಶಾಲಿ ಗಳಾಗುವತ್ತ ಚಿಂತನೆ ನಡೆಸಬೇಕು ಎಂದು ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಹೇಳಿದ್ದಾರೆ.

ಕುಂದಾಪುರದ ಬಿಲ್ಲವ ಸಮಾಜ ಸೇವಾ ಸಂಘ, ಶ್ರೀನಾರಾಯಣ ಗುರು ಯುವಕ ಮಂಡಲದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜನ್ಮದಿನದ ಪ್ರಯುಕ್ತ ರವಿವಾರ ಹಮ್ಮಿಕೊಂಡ ಬೃಹತ್ ಗುರು ಸಂದೇಶ ವಾಹನ ಜಾಥಾದ ಬಳಿಕ ಕೋಟೇಶ್ವರ ಹಳೆಅಳಿವೆ ಶ್ರೀಹಾಯ್ಗುಳಿ ಬೊಬ್ಬರ್ಯ ದೈವಸ್ಥಾನ ವಠಾರದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಅಧ್ಯಕ್ಷತೆಯನ್ನು ಶ್ರೀಹಾಯ್ಗುಳಿ ಬೊಬ್ಬರ್ಯ ದೈವಸ್ಥಾನದ ಗೌರವಾಧ್ಯಕ್ಷ ನಾರಾಯಣ ಬಿಲ್ಲವ ವಹಿಸಿದ್ದರು. ದೈವಸ್ಥಾನದ ಅಧ್ಯಕ್ಷ ವೆಂಕಟೇಶ ಪೂಜಾರಿ ಹಳೆಅಳಿವೆ, ಶ್ರೀನಾರಾಯಣ ಗುರು ಯುವಕ ಮಂಡಲದ ಅಧ್ಯಕ್ಷ ಯೋಗೇಶ್ ಪೂಜಾರಿ ಕೋಡಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಪೂಜಾರಿ ಹಳೆಅಳಿವೆ, ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಪೂಜಾರಿ ವಿಠಲವಾಡಿ, ಸ್ಥಳೀಯ ನಾರಾಯಣ ಗುರು ಯುವಕ ಮಂಡಲದ ಅಧ್ಯಕ್ಷ ಸಂದೀಪ್ ಪೂಜಾರಿ ಉಪಸ್ಥಿತರಿದ್ದರು. ರಾಜೇಶ್ ಕಡ್ಗಿಮನೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕುಂದಾಪುರ ಶ್ರೀನಾರಾಯಣ ಗುರು ಮಂದಿರದಲ್ಲಿ ವಾಹನ ಜಾಥಾಕ್ಕೆ ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಚಾಲನೆ ನೀಡಿದರು. ಅಲ್ಲಿಂದ ಹೊರಟ ಜಾಥವು ಕುಂದಾಪುರ ನಗರದಲ್ಲಿ ಸಂಚರಿಸಿ ಕೋಟೇಶ್ವರ ಮಾರ್ಗವಾಗಿ ತೆರಳಿತು.

ಈ ಸಂದರ್ಭದಲ್ಲಿ ಅಖಿಲ ಭಾರತ ಬಿಲ್ಲವ ಯೂನಿಯನ್ ಸಂಘಟನಾ ಕಾರ್ಯ ದರ್ಶಿ ಸುಧೀರ್ ಸುವರ್ಣ, ಸ್ಥಳೀಯ ಮುಖಂಡರಾದ ಕಾಳಪ್ಪ ಪೂಜಾರಿ, ಶಂಕರ್ ಪೂಜಾರಿ, ಮಂಜು ಬಿಲ್ಲವ, ಗುಣರತ್ನಾ, ಪ್ರಕಾಶ್ ಪೂಜಾರಿ ಬೀಜಾಡಿ, ಶೇಖರ್ ಪೂಜಾರಿ, ಧೀರಜ್ ಹೆಜಮಾಡಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News