ಉಡುಪಿ: ಯೂನಿಯನ್ ಬ್ಯಾಂಕ್ ಸಿಬ್ಬಂದಿಗಳಿಂದ ಪ್ರತಿಭಟನೆ

Update: 2024-09-13 14:54 GMT

ಉಡುಪಿ: ತಮ್ಮ 16 ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಒತ್ತಾಯಿಸಿ ಯೂನಿಯನ್ ಬ್ಯಾಂಕ್‌ನ ಅಧಿಕಾರಿಗಳ ಸಂಘ (ಎಐಯು ಬಿಒಎಫ್) ಹಾಗೂ ಸಿಬ್ಬಂದಿ ವರ್ಗದ ಸಂಘ (ಎಐಯುಬಿಇಎ)ಗಳ ಜಂಟಿ ಆಶ್ರಯದಲ್ಲಿ ಉಡುಪಿಯ ನಾರ್ತ್ ಶಾಲೆ ಬಳಿ ಇರುವ ಯೂನಿಯನ್ ಬ್ಯಾಂಕ್‌ನ ಉಡುಪಿ ಪ್ರಾದೇಶಿಕ ಕಚೇರಿ ಆವರಣದಲ್ಲಿ ಇಂದು ಸಂಜೆ ಬ್ಯಾಂಕ್‌ನ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದರು.

ಯೂನಿಯನ್ ಬ್ಯಾಂಕ್‌ನಲ್ಲಿರುವ ಜ್ವಲಂತ ಸಮಸ್ಯೆಗಳ ತ್ವರಿತ ಪರಿಹಾರ ಕ್ಕಾಗಿ ಬ್ಯಾಂಕಿನ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಇಂದಿನ ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದು, ತಮ್ಮ ನ್ಯಾಯಯುತ ಬೇಡಿಕೆಗೆ ಕೂಡಲೇ ಸಕಾರಾತ್ಮಕವಾಗಿ ಸ್ಪಂದಿಸುವಂತೆ ಆಡಳಿತದ ಮುಂದೆ ಬೇಡಿಕೆ ಇಟ್ಟರು.

ಬೇಡಿಕೆ: ಯೂನಿಯನ್ ಬ್ಯಾಂಕ್‌ನ ಶಾಖೆಗಳಲ್ಲಿ ಗ್ರಾಹಕರಿಗೆ ಉತ್ತಮ ಹಾಗೂ ತ್ವರಿತ ಸೇವೆ ನೀಡಲು ಅವಶ್ಯಕತೆ ಇರುವಷ್ಟು ಸಿಬ್ಬಂದಿಗಳನ್ನು ನೇಮಿಸಬೇಕು. ಬ್ಯಾಂಕ್ ಮತ್ತು ಅಧಿಕಾರಿ ಹಾಗೂ ನೌಕರ ಸಂಘಗಳ ಅಧಿಕೃತ ಒಪ್ಪಂದ ದಂತೆ ಸಿಬ್ಬಂದಿಗಳೊಂದಿಗೆ ವರ್ತಿಸಬೇಕು. ಅನುಕಂಪ ಆಧಾರಿತ ನೇಮಕಾತಿ, ಬ್ಯಾಂಕಿಂಗ್ ಕೆಲಸವನ್ನು ಹೊರಗುತ್ತಿಗೆ ನೀಡಬಾರದು. ಬ್ಯಾಂಕ್‌ನಲ್ಲಿ ಹಲವಾರು ವರ್ಷಗಳಿಂದ ದುಡಿಯುತ್ತಿರುವ ತಾತ್ಕಾಲಿಕ ನೌಕರರನ್ನು ಖಾಯಂಗೊಳಿಸ ಬೇಕೆಂಬುದು ಅವರ ಪ್ರಮುಖ ಬೇಡಿಕೆಗಳಾಗಿದ್ದವು.

ಎಐಯುಬಿಒಎಫ್ ಉಡುಪಿ ವಿಭಾಗದ ಕಾರ್ಯದರ್ಶಿ ಮಂಜುನಾಥ್ ಆರ್., ಎಐಯುಬಿಇಎ ಸಂಘಟನಾ ಕಾರ್ಯದರ್ಶಿ ನಾಗೇಶ್ ನಾಯಕ್, ಎಐಯುಬಿಒಎಫ್ ಉಡುಪಿ ವಿಭಾಗ ಕೇಂದ್ರ ಸಮಿತಿ ಸದಸ್ಯ ಪ್ರವೀಣ್ ಎನ್.ಬಿ., ಎಐಯುಬಿಒಎಫ್ ಕರ್ನಾಟಕ ಉಪಾಧ್ಯಕ್ಷ ಸುದೀಪ್, ಎಐಯುಬಿಒಎಫ್ ಉಡುಪಿ ವಿಭಾಗ ಕಾರ್ಯದರ್ಶಿ ಮನೋಜ್ ಕುಮಾರ್ ಮುಂತಾದ ವರು ಪ್ರತಿಭಟನೆಯ ವೇಳೆ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News