ಉಡುಪಿ: ಅಸಹಾಯಕ ಸ್ಥಿತಿಯಲ್ಲಿದ್ದ ಅಜ್ಜಿ, ಇಬ್ಬರು ಮೊಮ್ಮಕ್ಕಳ ರಕ್ಷಣೆ

Update: 2024-11-18 06:17 GMT

ಉಡುಪಿ, ನ.18: ಉಡುಪಿ ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧೆ ಮತ್ತು ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ರಕ್ಷಿಸಿದ್ದಾರೆ.

ರಕ್ಷಿಸಲ್ಪಟ್ಟವರನ್ನು ಬಾಗಲಕೋಟೆ ಮೂಲದ ಪಕೀರವ್ವ(75) ಹಾಗೂ ಅವರ ಮೊಮ್ಮಕ್ಕಳಾದ ಹನುಮಂತ(10) ಮತ್ತು ಪ್ರೇಮಾ(16) ಎಂದು ಗುರುತಿಸಲಾಗಿದೆ. ವೃದ್ಧೆಗೆ 'ಹೊಸಬದುಕು' ಆಶ್ರಮದಲ್ಲಿ ಪುರ್ನವಸತಿ ಕಲ್ಪಿಸಿದ್ದು, ಮಕ್ಕಳನ್ನು ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರಿಸಲಾಗಿದೆ.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಅನುಸಾರ, ಬಾಲಕಿಗೆ ನಿಟ್ಟೂರು ಬಾಲಕಿಯರ ಬಾಲಭವನದಲ್ಲಿ ಹಾಗೂ ಬಾಲಕನನ್ನು ದೊಡ್ಡಣಗುಡ್ಡೆಯ ಬಾಲಕರ ಬಾಲಭವನದಲ್ಲಿ ತುರ್ತು ಆಶ್ರಯ ನೀಡಲಾಗಿದೆ.

ರಥಬೀದಿ ರಾಘವೇಂದ್ರ ಮಠದ ಬಳಿ ಅಜ್ಜಿ ತನ್ನ ಇಬ್ಬರು ಮೊಮ್ಮಕ್ಕಳೊಂದಿಗೆ ಅಳುತ್ತಿದ್ದು, ಈ ಕುರಿತ ಮಾಹಿತಿ ತಿಳಿದ ನಿತ್ಯಾನಂದ ಒಳಕಾಡು ಸ್ಥಳಕ್ಕೆ ಆಗಮಿಸಿ ವಿಚಾರಿಸಿದರು. ಮಕ್ಕಳ ತಂದೆ ಕಳೆದೊಂದು ವರ್ಷದಿಂದ ಮನೆಗೆ ಬಾರದೆ ನಾಪತ್ತೆಯಾಗಿದ್ದಾನೆ. ಮಗನಿಗೆ ಹಡುಕಾಟ ನಡೆಸಲು ಉಡುಪಿಗೆ ಬಂದಿರುವುದಾಗಿ ವೃದ್ಧೆ ಹೇಳಿಕೊಂಡಿದ್ದಾರೆ.

ಕಾರ್ಯಚರಣೆಯಲ್ಲಿ ಹೊಸಬದುಕು ಆಶ್ರಮದ ವಿನಾಯಚಂದ್ರ, ರಾಜಶ್ರೀ ಮತ್ತು ಮಕ್ಕಳ ರಕ್ಷಣಾ ಘಟಕದ ಪ್ರಕಾಶ ನಾಯ್ಕ್, ಅಂಬಿಕಾ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News