ಕುಂದಾಪುರ: ಭಾವನ ಮಹಿಳಾ ಒಕ್ಕೂಟದಿಂದ ಮಹಿಳಾ ದಿನಾಚರಣೆ

ಕುಂದಾಪುರ: ಕುಂದಾಪುರ-ಬೈಂದೂರು ತಾಲೂಕುಗಳ ಭಾವನ ಮಹಿಳಾ ಒಕ್ಕೂಟದಿಂದ ಕುಂದಾಪುರ ಸಂತ ಮೇರಿಸ್ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ಮಾ.೨೩ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು.
ಕುಂದಾಪುರ ವಲಯ ಪ್ರಧಾನ ಕುಂದಾಪುರ ರೋಜರಿ ಚರ್ಚಿನ ಧರ್ಮಗುರು ಅ.ವಂ.ಪೌಲ್ ರೇಗೊ ಗಿಡಕ್ಕೆ ನೀರು ಎರೆಯುವೆ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಕಂಡ್ಲೂರ್ ಕನ್ನಿಕಾ ಎಜುಕೇಶನ್ ರಿಜಿಶ್ಟರ್ ಅಧ್ಯಕ್ಷೆ ಗೌರಿ ಆರ್.ಶ್ರೀಯಾನ್ ಭಾಗವಹಿಸಿದರು.
ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಜೂಡಿತ್ ಮೆಂಡೊನ್ಸಾ ಇವರಿಗೆ ಸನ್ಮಾನಿಸಲಾಯಿತು. ಕುಂದಾಪುರ ಮತ್ತು ಬೈಂದೂರು ತಾಲೂಕುಗಳ ಭಾವನ ಮಹಿಳಾ ಒಕ್ಕೂಟದ ಅಧ್ಯಾತ್ಮಿಕ ನಿರ್ದೇಶಕ ವಂ.ವಿನ್ಸೆಂಟ್ ಕುವೆಲ್ಲೊ, ಸುಗಮ್ಯ ಉಡುಪಿ ಜಿಲ್ಲಾ ಒಕ್ಕೂಟದ ಅಧ್ಯಕ್ಷೆ ಗ್ರೆಸಿ ಕುವೆಲ್ಲೊ, ಮಾನಿನಿ ರಾಜ್ಯ ಒಕ್ಕೂಟದ ಆಧ್ಯಕ್ಷೆ ಜಾನೆಟ್ ಬಾರ್ಬೊಜಾ, ಸಂಪದ ಸಂಸ್ಥೆಯ ಸ್ಟ್ಯಾನಿ ಫೆರ್ನಾಂಡಿಸ್ ಮಾತನಾಡಿದರು.
ಸುಗಮ್ಯ ಸೌರ್ಹಾದ ಸಹಕಾರಿ ನಿಯಮಿತ ಸ್ಥಾಪಕ ಅಧ್ಯಕ್ಷೆ ಪ್ರಮೀಳಾ ಡೆಸಾ, ಸುಗಮ್ಯ ಜಿಲ್ಲಾ ಒಕ್ಕೂಟ ಪತ್ರಿಕೆಯ ಸಂಪಾದಕಿ ಗ್ರೇಸಿ ಮಚಾದೊ ಸಚೇತಕರಾದ ಸಿಂತಿಯಾ ರೊಡ್ರಿಗಸ್, ಜ್ಯೋತಿ ಡಿಸೋಜ ಉಪಸ್ಥಿತರಿದ್ದರು.
ಭಾವನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪ್ರೀತಿ ಫೆರ್ನಾಂಡಿಸ್ ಸ್ವಾಗತಿಸಿದರು. ಕಾರ್ಯದರ್ಶಿ ಎವ್ಲಿನ್ ಫೆರ್ನಾಂಡಿಸ್ ವರದಿ ವಾಚಿಸಿದರು. ನಿರ್ಗಮನ ಅಧ್ಯಕ್ಷೆ ಶಾಲೆಟ್ ಡಿಸಿಲ್ವಾ ವಂದಿಸಿದರು. ಶಾಂತಿ ಆರ್.ಬರೆಟ್ಟೊ ಮತ್ತು ವಿನಯಾ ಡಿಕೋಸ್ತಾ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪುರ ಘಟಕದಿಂದ ನಾಟಕಗಾರ ಬರ್ನಾಡ್ ಡಿಕೋಸ್ತಾರವರ ಕಿರು ನಾಟಕ ಪ್ರದರ್ಶಿಸಲಾಯಿತು. ಬಸ್ರೂರು, ಬೈಂದೂರು, ಪಿಯುಸ್ ನಗರ, ಪಡುಕೋಣೆ, ಗಂಗೊಳ್ಳಿ, ತ್ರಾಸಿ ಒಕ್ಕೂಟಗಳಿಂದ ನೃತ್ಯ, ಪ್ರಹಸನ ಹಾಡುಗಳ ಪ್ರದರ್ಶನ ನಡೆಯಿತು.