ಡಿಸ್ಕ್ ಥ್ರೋ ಸ್ಪರ್ಧೆ: ಭಟ್ಕಳದ ನಾಗೇಂದ್ರ ಅಣ್ಣಪ್ಪ ನಾಯ್ಕ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

Update: 2024-10-04 06:49 GMT

ಭಟ್ಕಳ: 4ನೇ ಭಾರತೀಯ ಓಪನ್ ಯು-23 ಅಥ್ಲೆಟಿಕ್ಸ್ ಸ್ಪರ್ಧೆ 2024ರ ಜೂನಿಯರ್ ಮತ್ತು ಅಂಡರ್ -23 ಕ್ರೀಡಾಕೂಟದ ರಾಷ್ಟ್ರಮಟ್ಟದ ಡಿಸ್ಕ್ ಥ್ರೋ ಸ್ಪರ್ಧೆಯಲ್ಲಿ ಭಟ್ಕಳದ ಬೆಳಕೆ ಅಬ್ಬಿಹಿತ್ಲು ನಿವಾಸಿ ನಾಗೇಂದ್ರ ಅಣ್ಣಪ್ಪ ನಾಯ್ಕ ತೃತೀಯ ಸ್ಥಾನ ಗಳಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಿಹಾರದ ಪಾಟ್ನಾದಲ್ಲಿ ಸೆ.28ರಿಂದ 30ರವರೆಗೆ ನಡೆದ ಈ ಕ್ರೀಡಾಕೂಟದ ಡಿಸ್ಕ್ ಥ್ರೋ ಸ್ಪರ್ಧೆಯಲ್ಲಿ ನಾಗೇಂದ್ರ 51.98 ಮೀ. ದೂರ ಎಸೆದು ತೃತೀಯ ಸ್ಥಾನ ಗಳಿಸಿದ್ದಾರೆ.

ನಾಗೇಂದ್ರ ಪ್ರಸಕ್ತ ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News