ಕುಮಟಾ: ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ; ಏಳು ಕೋಟಿ ರೂ. ಗೂ ಅಧಿಕ ನಷ್ಟ

Update: 2024-03-28 08:36 GMT

ಕುಮಟಾ: ನಿರ್ಮಾಣ ಹಂತದಲ್ಲಿದ್ದ ಮಿರ್ಜಾನ್ -ಹೆಗಡೆ ನಡುವಿನ ಸೇತುವೆಯ ಮೂರು ಗರ್ಡರ್ಗಳು ಧರೆಗೆ ಉರುಳಿದ್ದು, ಏಳು ಕೋಟಿ ರೂ. ಗೂ ಅಧಿಕ ಮೊತ್ತದ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ.

ನಬಾರ್ಡ್ ಆರ್‌ಐಡಿಎಫ್ 27ರ ಅಡಿಯಲ್ಲಿ 18.20 ಕೋಟಿ ರೂ. ಅನುದಾನದಲ್ಲಿ ಅಘನಾಶಿನಿ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿದ್ದ ಈ ಸೇತುವೆಯ ಕಾಮಗಾರಿ ಒಂದು ಹಂತಕ್ಕೆ ಬಂದಿದ್ದು‌, ಈ ವರ್ಷ ಪೂರ್ಣವಾಗುವ  ಭರವಸೆಯಿತ್ತು ಎನ್ನಲಾಗಿದೆ.

ಉತ್ತರಕನ್ನಡ ಹಾಗೂ ರಾಜ್ಯದ ವಿವಿಧೆಡೆ ಕಾಮಗಾರಿಗಳನ್ನು ನಿರ್ವಹಿಸಿದ್ದ ಕುಂದಾಪುರದ ಡಿಕೋಸ್ತಾ ಕಂಪನಿ ಸೇತುವೆಯ ಕಾಮಗಾರಿ ಗುತ್ತಿಗೆ ಪಡೆದಿತ್ತು.

ಅವಘಡದಿಂದಾಗಿ ಒಮ್ಮೆಲೆ ಸುತ್ತಲೂ ಭೂಮಿ ಕಂಪಿಸಿ ಆತಂಕ ಹುಟ್ಟಿಸಿತ್ತು. ಸೇತುವೆ ಕುಸಿದು ಬಿದ್ದ ಪರಿಣಾಮ 3 ಕೋಟಿ ರೂ. ಬೆಲೆಬಾಳುವ ಕ್ರೇನ್, 25 ಲಕ್ಷ ರೂ. ವೆಚ್ಚದ ಹಿಟಾಚಿ, ಒಂದು ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿದೆ.ಊಟದ ಸಮಯವಾದ್ದರಿಂದ ಕಾರ್ಮಿಕರು ಬೇರೆಡೆ ವಿಶ್ರಾಂತಿ ಪಡೆಯುತ್ತಿದ್ದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News