ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ತೆಂಗಿನಗುಂಡಿ ಶಾಲೆಯ ವಿದ್ಯಾರ್ಥಿಗಳು ಆಯ್ಕೆ
Update: 2023-09-10 08:56 GMT
ಭಟ್ಕಳ, ಸೆ.10 ತಾಲೂಕಿನ ಗೊರಟೆಯಲ್ಲಿ ನಡೆದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಗುಂಡು ಎಸೆತ ಸ್ಪರ್ಧೆಯಲ್ಲಿ ತೆಂಗಿನಗುಂಡಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಮಾಧುರಿ ಕೃಷ್ಣಗೊಂಡ ಪ್ರಥಮ, ರೂಪಾಕ್ಷಿ ಬೆರ್ಮಾ ಮೊಗೇರ್ ದ್ವಿತೀಯ ಹಾಗೂ ಚಕ್ರ ಎಸೆತದಲ್ಲಿ ರೂಪಾಕ್ಷಿ ಬೆರ್ಮ ಮೊಗೆರ್ ಪ್ರಥಮ ಮಾಧುರಿ ಕೃಷ್ಣಗೊಂಡ ತೃತೀಯ, ಉದ್ದ ಜಿಗಿತ ಧನ್ಯಾ ದುರ್ಗಯ್ಯಗೊಂಡ ಪ್ರಥಮ, ತ್ರಿವಿಧ ಜಿಗಿತ ಮೋನಿಕಾ ಮೋಹನ್ ದೇವಾಡಿಗ ಪ್ರಥಮ, 200 ಮೀಟರ್ ಓಟ ಧನ್ಯಾ ದುರ್ಗಯ್ಯಗೊಂಡ ಪ್ರಥಮ, 400 ಮೀಟರ್ ಓಟದಲ್ಲಿ ಮೋನಿಕಾ ಮೋಹನ್ ದೇವಾಡಿಗ ಪ್ರಥಮ, ಎತ್ತರ ಜಿಗಿತದಲ್ಲಿ ಹರ್ಷಿತಾ ಗುರು ನಾಯ್ಕ್ ದ್ವಿತೀಯ, ರಕ್ಷಿತಾ ದೇವಾಡಿಗ ತೃತೀಯ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ಉಷಾ ಜಿ. ಭಟ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕ ಗಿರೀಶ್ ವಿ. ನಾಯಕ್ ತರಬೇತಿ ನೀಡಿದ್ದಾರೆ.