ಯಲ್ಲಾಪುರ | ನಿಲ್ಲಿಸಿದ್ದ ಕಾರಿಗೆ ಬೈಕ್ ಢಿಕ್ಕಿ: ಇಬ್ಬರು ಸ್ಥಳದಲ್ಲೇ ಮೃತ್ಯು
Update: 2023-10-16 09:53 GMT
ಯಲ್ಲಾಪುರ, ಅ.16: ನಿಂತಿದ್ದ ಕಾರಿಗೆ ಬೈಕೊಂಡು ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ರವಿವಾರ ಪಟ್ಟಣದ ರಾ. ಹೆದ್ದಾರಿಯಲ್ಲಿ ನಡೆದಿದೆ. ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
ರಾಮನಕೊಪ್ಪದ ದರ್ಶನ ಭಂಡಾರಿ (17) ಮತ್ತು ಹುಣಶೆಟ್ಟಿಕೊಪ್ಪದ ರಾಜೇಶ ಆಚಾರಿ (18) ಮೃತಪಟ್ಟವರು. ಮಂಜುನಾಥ ನಗರದ ಜಾಬಿರ್ ಮುಹಮ್ಮದ್ ಗೌಸ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಲಾಗಿದೆ.
ಅತೀ ವೇಗದಲ್ಲಿದ್ದ ಬೈಕ್ ಸವಾರನ ನಿಯಂತ್ರಣ ತಪ್ಪಿ ನಿಲ್ಲಿಸಿದ್ದ ಕಾರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.