ವಿಜಯಪುರ | ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ: 15 ಕಾರ್ಮಿಕರು ಪಾರು
Update: 2024-07-07 06:28 GMT
ವಿಜಯಪುರ, ಜು.7: ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದ ನಂದಿ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡ ಘಟನೆ ರವಿವಾರ ಬೆಳಗ್ಗೆ ನಡೆದಿದೆ. ಈ ವೇಳೆ ಕಾರ್ಖಾನೆಯಲ್ಲಿದ್ದ 15 ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ.
ಇಂದು ಬೆಳಗ್ಗೆ ಸ್ಫೋಟವಾದ ಬಾಯ್ಲರ್ ಬಳಿಯೇ 15 ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದರು. ಅವರು ಚಹಾ ಕುಡಿಯಲು ಹೊರಗೆ ಹೊರಟಿದ್ದ ವೇಳೆ ಬಾಯ್ಲರ್ ಸ್ಫೋಟಗೊಂಡಿದೆ ಎಂದು ತಿಳಿದುಬಂದಿದೆ.
ಮುಂಬರುವ ಹಂಗಾಮಿಗೆ ಕಬ್ಬು ನುರಿಸಲು ಕಾರ್ಖಾನೆಯ ಯಂತ್ರಗಳನ್ನು ಸಿದ್ಧ ಮಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಸ್ಫೋಟಗೊಂಡ ಬಾಯ್ಲರ್ ಅನ್ನು 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ತಾಂತ್ರಿಕವಾಗಿ ಅಷ್ಟೇನು ಅನುಭವ ಇಲ್ಲದ ಪುಣೆ ಮೂಲದ ಇಂಜಿನಿಯರಿಂಗ್ ಸಂಸ್ಥೆ ಇದನ್ನು ನಿರ್ಮಿಸಿದ್ದು, ಇದೇ ಕಾರಣಕ್ಕೆ ಸ್ಫೋಟ ಸಂಭವಿಅಸಿದೆ ಎಂಬ ಆರೋಪ ಕೇಳಿ ಬಂದಿದೆ.