ವಕ್ಪ್ ಆಸ್ತಿ ವಿವಾದ | ನೋಟಿಸ್ ಕೊಟ್ಟ ತಕ್ಷಣ ಖಾತಾ ಬದಲಾವಣೆ ಆಗಲ್ಲ : ವಿಜಯಪುರ ಡಿ.ಸಿ. ಭೂಬಾಲನ್
ವಿಜಯಪುರ : ವಕ್ಫ್ ಆಸ್ತಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ವಿಜಯಪುರ ಜಿಲ್ಲೆಯಾದ್ಯಂತ ವಕ್ಫ್ ಬೋರ್ಡ್ ಕಾಯ್ದೆಯಿಂದ ಆಗುತ್ತಿರುವ ತೊಂದರೆ ಹಾಗೂ ರೈತರಿಂದ ಅಹವಾಲು ಸ್ವೀಕರಿಸಲು ರಾಜ್ಯ ಬಿಜೆಪಿ ನಿಯೋಗ ಇಂದು ಜಿಲ್ಲೆಗೆ ಭೇಟಿ ನೀಡಿ, ರೈತರ ಜೊತೆ ಚರ್ಚಿಸಿದೆ.
ವಕ್ಫ್ ಆಸ್ತಿ ವಿಚಾರ ಸಂಬಂಧ ರೈತರೊಂದಿಗಿನ ಚರ್ಚೆ ಬಳಿಕ ಗೋವಿಂದ ಕಾರಜೋಳ ನೇತೃತ್ವದ ಬಿಜೆಪಿ ನಿಯೋಗ ಜಿಲ್ಲಾಧಿಕಾರಿ ಭೂಬಾಲನ್ ಅವರನ್ನು ಭೇಟಿ ಮಾಡಿ ಈ ಸಂಬಂಧ ಮಾಹಿತಿ ಪಡೆದುಕೊಂಡಿದೆ.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ವಿಜಯಪುರ ಜಿಲ್ಲಾಧಿಕಾರಿ ಭೂಬಾಲನ್, " ಸಚಿವ ಝಮೀರ್ ಅಹ್ಮದ್ ಖಾನ್ ಅವರು ಒತ್ತುವರಿ ಜಾಗ ತೆರವುಗೊಳಿಸುವಂತೆ ಹೇಳಿದ್ದರು. ಈಗಾಗಿ ಸಚಿವರ ಸೂಚನೆ ಮೇರೆಗೆ ಒತ್ತುವರಿ ತೆರವು ಮಾಡಿದ್ದೇವೆ. ಇಂದೀಕರಣ ಅಂದರೆ ಗಣಕೀಕರಣ ಸತತವಾಗಿ ನಡೆಯುತ್ತೆ. ಪ್ರತಿ ವರ್ಷವೂ ಗಣಕೀಕರಣ ಆಗಿವೆ. ನೋಟಿಸ್ ಕೊಡದೆಯೂ ಇಂದೀಕರಣ ಆದ ಉದಾಹರಣೆ ಇವೆ" ಎಂದು ತಿಳಿಸಿದರು.
ಖಾತಾ ಬದಲಾವಣೆ ಆಗುವುದಿಲ್ಲ :
ನೋಟಿಸ್ ಕೊಟ್ಟ ತಕ್ಷಣ ಖಾತಾ ಬದಲಾವಣೆ ಆಗುವುದಿಲ್ಲ. ಇಬ್ಬರನ್ನೂ ಕರೆದು ವಿಚಾರಣೆ ನಡೆಸುತ್ತೇವೆ. ಕಾಲಂ ನಂ.9ರಲ್ಲಿ ಹಾಗೂ ಮಾಲೀಕತ್ವ ಜಾಗದಲ್ಲಿ ವಕ್ಫ್ ಹೆಸರು ಹಾಕಿಲ್ಲ. 44 ಆಸ್ತಿಗಳಿಗೆ ನೋಟಿಸ್ ಕೊಡದೆ ಇಂದೀಕರಣ ಮಾಡಿದ್ದೇವೆ. ಆದರೆ ಅವರ ಮಾಲೀಕತ್ವ ಬದಲಾಗಲ್ಲ. ಇಂಡಿ ತಹಶೀಲ್ದಾರ್ 41 ಖಾತೆಗಳಿಗೆ ನೋಟಿಸ್ ಕೊಡದೆ ಗಣಕೀಕರಣ ಮಾಡಿದ್ದಾರೆ. ಅದೆಲ್ಲವನ್ನು ರದ್ದು ಮಾಡಿದ್ದೇವೆ ಎಂದರು.
250 ಎಕರೆ ಭೂಮಿಗೆ ನೋಟಿಸ್ ಕೊಡಲಾಗಿದೆ. ಈಗಾಗಲೇ ಕೊಟ್ಟಿರುವ ನೋಟಿಸ್ಗಳನ್ನು ವಾಪಸ್ ಪಡೆಯುತ್ತೇವೆ ಎಂದು ತಿಳಿಸಿದರು.