ಇಸ್ರೇಲ್ ಮತ್ತು ಫೆಲೆಸ್ತೀನ್ ಸ್ಥಿತಿಗತಿಗಳು

Update: 2023-10-30 05:13 GMT

Photo: istockphoto.com

ಫೆಲೆಸ್ತೀನ್ ಎಂಬೊಂದು ದೇಶದಲ್ಲಿ ಯಾವ ರೀತಿ ಇಸ್ರೇಲ್ ಎಂಬ ಒಂದು ಹೊಸ ದೇಶವನ್ನು ಸೃಷ್ಟಿಸಿ ಬೆಳೆಸಲಾಯಿತು ಎಂಬ ಕಥೆಯ ಹಿಂದೆ ಬಹಳಷ್ಟು ಯೋಜನೆಗಳು, ಸಿದ್ಧತೆಗಳು, ಸಂಚುಗಳು ಮತ್ತು ಅನೇಕ ಹಿಂಸಾತ್ಮಕ ಕಾರ್ಯಾಚರಣೆಗಳು ಅಡಗಿವೆ. 1948 ರಲ್ಲಿ ಇಸ್ರೇಲ್ ಎಂಬ ದೇಶ ರಚಿತವಾದಾಗ ಫೆಲೆಸ್ತೀನ್ನ 80ಶೇ. ಕ್ಕೂ ಹೆಚ್ಚಿನ ನಾಗರಿಕರು, ರಾತ್ರಿ ಬೆಳಗಾಗುವುದರೊಳಗೆ ತಮ್ಮದೇ ನಾಡಿನಲ್ಲಿ ನಿರಾಶ್ರಿತರಾಗಿ ಬಿಟ್ಟರು. ನಿಜವಾಗಿ ಅದು 20ನೇ ಶತಮಾನದ ಆರಂಭದಲ್ಲಿ ಪ್ರಾರಂಭವಾದ ದೀರ್ಘ ಪ್ರಕ್ರಿಯೆಯ ಒಂದು ಪ್ರಮುಖ ಮೈಲುಗಲ್ಲಾಗಿತ್ತು. ಪ್ರಕ್ರಿಯೆ ಈಗಲೂ ಮುಂದುವರಿದಿದೆ.

ಇಸ್ರೇಲ್ ಎಂಬೊಂದು ದೇಶವನ್ನು ಸ್ಥಾಪಿಸಲಿಕ್ಕಾಗಿ ಝಿಯೋನಿಸ್ಟ್ ಪಡೆಗಳು ಫೆಲೆಸ್ತೀನ್ನ ಕೆಲವು ಪ್ರಮುಖ ನಗರಗಳ ಮೇಲೆ ದಾಳಿ ನಡೆಸಿದವು. 530 ಗ್ರಾಮಗಳನ್ನು ಸಂಪೂರ್ಣ ನಾಶಪಡಿಸಿಬಿಟ್ಟವು. 1948ರಲ್ಲಿ ಈ ಕಾರ್ಯಾಚರಣೆಯ ಫಲವಾಗಿ 13,000 ಫೆಲೆಸ್ತೀನ್ ನಾಗರಿಕರು ಹತರಾದರು. 7,50,000 ಫೆಲೆಸ್ತೀನಿ ನಾಗರಿಕರನ್ನು ಅವರ ಮನೆಗಳಿಂದ ಹೊರದಬ್ಬಲಾಯಿತು. ಅವರೆಲ್ಲಾ ನಿರಾಶ್ರಿತರಾಗಿ ಬಿಟ್ಟರು. ಇದು ಝಿಯೋನಿಸ್ಟರು ಯೋಜಿಸಿದ್ದ, ಫೆಲೆಸ್ತೀನ್ ಜನತೆಯನ್ನು ಅವರ ನೆಲದಿಂದ ಹೊರದಬ್ಬುವ, ಜನಾಂಗೀಯ ಶುಚೀಕರಣದ ಪ್ರಕ್ರಿಯೆಯಲ್ಲಿ, ಆವರೆಗಿನ ಅತಿದೊಡ್ಡ ಕ್ರಮವಾಗಿತ್ತು. ಇಂದು ಇಂತಹ ನಿರಾಶ್ರಿತರು ಮತ್ತವರ ಸಂತತಿಗಳ ಒಟ್ಟು ಸಂಖ್ಯೆ 70 ಲಕ್ಷಕ್ಕಿಂತ ಅಧಿಕವಿದೆ. ಅವರಲ್ಲಿ ಅನೇಕರು ಅಕ್ಕಪಕ್ಕದ ಅರಬ್ ದೇಶಗಳಲ್ಲಿ ನಿರಾಶ್ರಿತರಾಗಿ ಬದುಕುತ್ತಿದ್ದಾರೆ. ಒಂದಿಲ್ಲೊಂದು ದಿನ ತಮಗೆ ತಮ್ಮ ತಾಯ್ನಾಡಿಗೆ ಮರಳುವ ಅವಕಾಶ ಸಿಕ್ಕೀತು ಎಂಬ ಆಶೆಯನ್ನು ಉಳಿಸಿಕೊಂಡಿದ್ದಾರೆ. ಎಲ್ಲೂ ಇಲ್ಲದಿದ್ದ ಇಸ್ರೇಲ್ ಎಂಬ ದೇಶ 50 ವರ್ಷಗಳಲ್ಲಿ ಹೇಗೆ ಕ್ರಮೇಣ ಬೆಳೆಯಿತು? ಮತ್ತು ಫೆಲೆಸ್ತೀನ್ ಎಂಬ ದೇಶ 50 ವರ್ಷಗಳಲ್ಲಿ ಹೇಗೆ ಕ್ರಮೇಣ ಅಳಿದು ಹೋಯಿತು? ಈ ಪ್ರಶ್ನೆಯ ಉತ್ತರವನ್ನು ಈ ಕೆಳಗಿನ ಚಾರ್ಟ್ ಚೆನ್ನಾಗಿ ವಿವರಿಸುತ್ತದೆ:




 

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಯೂಸುಫ್ ಪುತ್ತಿಗೆ

contributor

Similar News