ಪಿಯು ಫಲಿತಾಂಶ: ಯಾದಗಿರಿ ಜಿಲ್ಲೆಯಲ್ಲಿ 5ನೇ ಸ್ಥಾನ ಪಡೆದ ದೋರನಹಳ್ಳಿಯ ಡಿ.ಡಿ.ಯು ಪಿಯು ಕಾಲೇಜು

ಯಾದಗಿರಿ: ದೋರನಹಳ್ಳಿ ಗ್ರಾಮದ ಡಿ.ಡಿ.ಯು ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಜಿಲ್ಲೆಗೆ 5ನೇ ಸ್ಥಾನ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದೆ. ಕಲಾ ವಿಭಾಗದಲ್ಲಿ ದೇವಮ್ಮ ಮಾಳಪ್ಪ 95.16% ಜಿಲ್ಲೆಗೆ 5ನೇ ಸ್ಥಾನ, ವಾಣಿಜ್ಯ ವಿಭಾಗದಲ್ಲಿ ಮೌನೇಶ ಮಲ್ಲಿಕಾರ್ಜುನ 91% ಜಿಲ್ಲೆಗೆ 5ನೇ ಸ್ಥಾನ, ಪದ್ಮಾವತಿ ಶರಣಪ್ಪ 90% ಜಿಲ್ಲೆಗೆ 6ನೇ ಸ್ಥಾನ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕಲಾ ವಿಭಾಗದಲ್ಲಿ ದೇವಮ್ಮ ಮಾಳಪ್ಪ 95.16% ಡಿಡಿಯು ಕಾಲೇಜಿಗೆ ಪ್ರಥಮ, ಭಾಗ್ಯಜ್ಯೋತಿ ಮಾಳಪ್ಪ 92% ದ್ವಿತೀಯ, ಜ್ಯೋತಿ ವಿಶ್ವನಾಥರೆಡ್ಡಿ 89% ತೃತೀಯ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಮೌನೇಶ ಮಲ್ಲಿಕಾರ್ಜುನ 91% ಕಾಲೇಜಿಗೆ ಪ್ರಥಮ, ಪದ್ಮಾವತಿ ಶರಣಪ್ಪ 90% ದ್ವಿತೀಯ, ಬೀರಲಿಂಗ ಹಣಮಂತ್ರಾಯ 86% ತೃತೀಯ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಭಾಗ್ಯಶ್ರೀ ರವಿ 83% ಕಾಲೇಜಿಗೆ ಪ್ರಥಮ, ಶೀಲಾದೇವಿ ಶ್ರೀನಿವಾಸ 82% ದ್ವಿತೀಯ, ಕಾವೇರಿ ಹೀರು 81% ತೃತೀಯ ಸ್ಥಾನ ಪಡೆದಿದ್ದಾರೆ. ಕಲಾವಿಭಾಗದಲ್ಲಿ ದೇವಮ್ಮ ಮಾಳಪ್ಪ 95.16% ಫಲಿತಾಂಶ ಪಡೆಯುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಡಿ.ಡಿ.ಯು ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ.ಭೀಮಣ್ಣ ಮೇಟಿ, ಕಾರ್ಯದರ್ಶಿ ದೇವಿಂದ್ರಪ್ಪ ಮೇಟಿ, ಆಡಳಿತ ಅಧಿಕಾರಿ ಮಲ್ಲಿಕಾರ್ಜುನ ಮೇಟಿ ಕಾಲೇಜಿನ ಪ್ರಾಂಶುಪಾಲ ಮಹೇಶ ಪತ್ತಾರ ಮತ್ತು ಕಾಲೇಜಿನ ಉಪನ್ಯಾಸಕರು ಹರ್ಷವ್ಯಕ್ತಪಡಿಸಿದ್ದಾರೆ.
ಡಿ.ಡಿ.ಯು ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಕಾಲೇಜಿಗೆ ಟಾಪರ್ ಆಗಿರುವುದು ತುಂಬಾ ಖುಷಿ ತಂದಿದೆ. ಕಾಲೇಜಿನಲ್ಲಿ ಎಲ್ಲಾ ಉಪನ್ಯಾಸಕರು ಕಾಳಜಿ ವಹಿಸಿ ಉತ್ತಮ ಬೋಧನೆ ಮಾಡಿದ್ದಾರೆ. ಉಪನ್ಯಾಸಕರ ಮಾರ್ಗದರ್ಶನದಂತೆ ಅಧ್ಯಯನ ಮಾಡಿದ್ದೇನೆ.
-ದೇವಮ್ಮ ಮಾಳಪ್ಪ, ಜಿಲ್ಲೆಗೆ 5ನೇ ಸ್ಥಾನ ಪಡೆದ ವಿದ್ಯಾರ್ಥಿನಿ
ಗ್ರಾಮೀಣ ಭಾಗದ ಮಕ್ಕಳಿಗೆ ನಮ್ಮ ಸಂಸ್ಥೆಯಲ್ಲಿ ಗುಣ ಮಟ್ಟದ ಶಿಕ್ಷಣ ಜೊತಗೆ ಸ್ಪರ್ಧಾತ್ಮಕ ಪರೀಕ್ಷೆಗಳಾದ ನೀಟ್ ಮತ್ತು ಸಿಇಟಿ ಮುಂತಾದ ಪರೀಕ್ಷೆಗಳಿಗೆ ಪ್ರಥಮ ಪಿಯುಸಿಯಿಂದಲೆ ಬೋಧನೆ ನಡೆದಿದೆ. ಸಂಸ್ಥೆಯ ಸೌಲಭ್ಯಗಳು ಈ ಭಾಗದ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಲಿ.
-ಡಾ.ಭೀಮಣ್ಣ ಮೇಟಿ, ಸಂಸ್ಥಾಪಕರು ಡಿ.ಡಿ.ಯು ಸಮೂಹ ಶಿಕ್ಷಣ ಸಂಸ್ಥೆ