ಸುರಪುರ ಉಪ ಚುನಾವಣೆ : ಶೇ.66.72ರಷ್ಟು ಮತದಾನ

Update: 2024-05-07 14:48 GMT

ಬೆಂಗಳೂರು : ಕಾಂಗ್ರೆಸ್ ಶಾಸಕ ರಾಜ ವೆಂಕಟಪ್ಪ ನಾಯಕ ನಿಧನದಿಂದ ತೆರವಾಗಿದ್ದ ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ಮಂಗಳವಾರ ನಡೆದ ಉಪ ಚುನಾವಣೆಯಲ್ಲಿ ಶೇ.66.72ರಷ್ಟು ಮತದಾನವಾಗಿದೆ.

ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ರಾಜ ವೇಣುಗೋಪಾಲ ನಾಯಕ ಹಾಗೂ ಬಿಜೆಪಿಯಿಂದ ನರಸಿಂಹ ನಾಯಕ(ರಾಜೂ ಗೌಡ) ಸ್ಪರ್ಧಿಸಿದ್ದಾರೆ. ಮೈತ್ರಿ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷವು ಈ ಉಪ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಈ ಉಪ ಚುನಾವಣೆಯ ಫಲಿತಾಂಶವು ಜೂ.4ರಂದೇ ಪ್ರಕಟವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News