ಯಾದಗಿರಿ | ಮಾಜಿ ಶಾಸಕ ದಿ.ವೀರಬಸವಂತರೆಡ್ಡಿ ಮುದ್ನಾಳ್ ಹುಟ್ಟು ಹಬ್ಬದ ಪ್ರಯುಕ್ತ ಡಿ.31ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

Update: 2024-12-29 10:45 GMT

ಯಾದಗಿರಿ : ಉತ್ತರ ಕರ್ನಾಟಕ ಭಾಗದ ಹೆಸರಾಂತ ವೈದ್ಯರಾಗಿದ್ದ ಹಾಗೂ ಯಾದಗಿರಿ ಮತಕ್ಷೇತ್ರದ ಮಾಜಿ ಶಾಸಕರೂ ಆಗಿದ್ದ ದಿ.ವೀರಬಸವಂತರಡ್ಡಿ ಮುದ್ನಾಳ್ ಅವರ 73ನೇ ಹುಟ್ಟು ಹಬ್ಬದ ಪ್ರಯುಕ್ತ ಡಿ.31ರಂದು ಇಲ್ಲಿನ ವಿಬಿಆರ್ ಮುದ್ನಾಳ್ ಮಲ್ಟಿ ಸ್ಟೇಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಅಮೋಘ ಬಿ.ಎನ್. ತಿಳಿಸಿದ್ದಾರೆ.

ಭಾನುವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3ಗಂಟೆವರೆಗೆ ಶಿಬಿರ ನಡೆಯಲಿದೆ. ಸಾಮಾನ್ಯ ಶಸ್ತ್ರತಜ್ಞರು, ಸಲಹಾ, ಡರ್ಮಟಾಲಜಿ, ಸ್ತ್ರೀ ರೋಗ, ಎಲಬು ಮತ್ತು ಕೀಲು, ಪೀಡಿಯಾಟ್ರಿಕ್ಸ್ ಹೀಗೆ ವಿವಿಧ ಕಾಯಿಲೆಗಳಿಗೆ ತಜ್ಞ ವೈದ್ಯರು ತಪಾಸಣೆ ಮಾಡಲಿದ್ದಾರೆಂದು ಅವರು ಹೇಳಿದರು.

ಶಿಬಿರದಲ್ಲಿ ನುರಿತ ವೈದ್ಯರಾದ ಡಾ.ಸಂಗಮ್ಮ ವಿ.ಮುದ್ನಾಳ್, ಡಾ.ಬಸವರಾಜ ನರಸಣಗಿ, ಡಾ.ಉಮಾಮಹೇಶ್ವರಿ, ಡಾ.ಕ್ಷೀತಿಜ್, ಡಾ.ಶ್ರೀಧರ, ಡಾ.ಅಲ್ತಾಫ್, ಡಾ.ವೀರೇಶ ಜಾಕಾ ಸೇರಿದಂತೆಯೇ ಅನೇಕ ತಜ್ಞ ವೈದ್ಯರ ತಂಡ ಅಂದು ಶಿಬಿರದಲ್ಲಿ ರೋಗಿಗಳಿಗೆ ತಪಾಸಣೆ ಮಾಡಲಿದ್ದಾರೆಂದರು.

ಬಡತನದ ರೇಖೆಗಿಂತ ಕಡಿಮೆ ಇರುವ ಜನರಿಗೆ ( ಬಿಪಿಎಲ್ ಕಾರ್ಡ್ ಹೊಂದಿದವರಿಗೆ) ಉಚಿತ ಶಸ್ತ್ರ ಚಿಕಿತ್ಸೆ ಮಾಡಲಾಗುವುದು. ಈ ವೇಳೆ ಪ್ರಯೋಗಾಲಯದ ಶುಲ್ಕದಲ್ಲಿ ಶೇ.20ರಷ್ಟು, ಔಷಧಿಗಳ ಶುಲ್ಕದಲ್ಲಿ ಶೇ.10 ಮತ್ತು ಶಸ್ತ್ರಚಿಕಿತ್ಸೆ ಶುಲ್ಕದಲ್ಲಿ ( ಎಪಿಎಲ್ ಕಾರ್ಡ್ ಇದ್ದವರಿಗೆ) ಶೇ.50ರಷ್ಟು ರಿಯಾಯಿತಿ ನೀಡಲಾಗುವುದೆಂದು ಡಾ.ಅಮೋಘ ವಿವರಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆ ಹಾಗೂ ಬೇರೆ ಜಿಲ್ಲೆಗಳ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಕಿ ಮಾರುತಿ ಕಲಾಲ್ ಇದ್ದರು.

ಶಿಬಿರದ ನಿಮಿತ್ಯ ಈಗಾಗಲೇ ಜಿಲ್ಲೆಯಲ್ಲಿ ಜನರಲ್ಲಿ ಜಾಗೃತಿ ಮತ್ತು ಪ್ರಚಾರ ಮಾಡಲಾಗುತ್ತಿದ್ದು, ನಗರ ಸೇರಿದಂತೆಯೇ ಸುಮಾರು 80ಕ್ಕೂ ಹೆಚ್ಚು ಹಳ್ಳಿಗಳ ಜನರು ಅಂದು ಭಾಗವಹಿಸಿ ತಪಾಸಣೆ ಮಾಡಿಕೊಳ್ಳಲಿದ್ದಾರೆ. ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯವಾಗಿದೆ. ರೋಗ ಬಂದ ಮೇಲೆ ವೈದ್ಯರನ್ನು ಕಾಣುವ ಬದಲಿಗೆ ಆಗಾಗ ತಪಾಸಣೆ ಮಾಡಿಕೊಂಡರೇ ಮುಂದಿನ ಅನಾಹುತ ತಪ್ಪಿಸಬಹುದು ಮತ್ತು ಹಣವೂ ಉಳಿಸಬಹುದು.

ಡಾ.ಕ್ಷೀತಿಜ್, ವಿಆರ್ ಬಿ ಆಸ್ಪತ್ರೆ ಯಾದಗಿರಿ.

ರೈತರು, ರೈತ ಕಾರ್ಮಿಕರು ಹೊಲಗಳಲ್ಲಿ ಕ್ರಿಮಿನಾಶಕ ಔಷಧಿ ಸಿಂಪಡಿಸುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕಾರಣ, ವಿಷದ ವಾಸನೆ ಸಹಜವಾಗಿ ದೇಹದೊಳಗೆ ರವಾನೆಯಾಗುತ್ತದೆ. ಆಗ ಅಂತಹವರು ಅಸ್ತವ್ಯಸ್ತಗೊಂಡು ಗಾಬರಿಯಾಗಿ ಆಸ್ಪತ್ರೆಗೆ ಬರುತ್ತಾರೆ. ಇದನ್ನು ಗಮನಿಸಿದ ನಾವುಗಳು ಅನೇಕ ಕಡೆ ಕ್ರೀಮಿನಾಶಕ ಔಷಧಿಗಳನ್ನು ಮಾರುವ ಅಂಗಡಿ ಮಾಲಕರಿಗೆ ಆಸ್ಪತ್ರೆಯಿಂದ ಮಾಸ್ಕ್ ಗಳನ್ನು ಕೊಟ್ಟು ರೈತರಿಗೆ ಮುಟ್ಟಿಸುವಂತೆಯೇ ಹೇಳಿದ್ದೆವೆ.

ಡಾ. ಬಸವರಾಜ ನರಸಣಗಿ ಹಿರಿಯ ವೈದ್ಯರು, ಯಾದಗಿರಿ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News