ಯಾದಗಿರಿ | ನೆಲ, ಜಲದ ಸಂರಕ್ಷಣೆಯಲ್ಲಿ ಸಂಘಟನೆಗಳ ಪಾತ್ರ ಪ್ರಮುಖವಾದದ್ದು: ಲಲಿತಾ ಅನಪೂರ

Update: 2024-12-30 15:19 GMT

ಯಾದಗಿರಿ : ಕನ್ನಡ ಭಾಷೆ, ನೆಲ, ಜಲದ ರಕ್ಷಣೆಯಲ್ಲಿ ಜಯ ಕರ್ನಾಟಕ ಸಂಘಟನೆ ಪ್ರಮುಖ ಪಾತ್ರವಹಿಸಿದೆ. ಇನ್ನೂ ಕೂಡಾ ಸತತ ಹೋರಾಟಗಳ ಮೂಲಕ ಜನಮನ ಗೆಲ್ಲಲಿ ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಹೇಳಿದರು.

ಇಲ್ಲಿನ ಪಂಪಮಹಾಕವಿ ಮಂಟಪದಲ್ಲಿ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಘಟಕವು ಹಮ್ಮಿಕೊಂಡಿದ್ದ ಸುವರ್ಣ ಕರ್ನಾಟಕ ಮಹೋತ್ಸವ ಹಾಗೂ ಕುವೆಂಪು ಜನ್ಮ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ಜಿಲ್ಲೆ ಹಿಂದುಳಿದ ಮತ್ತು ತೆಲಂಗಾಣ ಗಡಿಗೆ ಹೊಂದಿಕೊಂಡಿರುವದರಿಂದ ಇಲ್ಲಿ ಕನ್ನಡದ ಕೆಲಸ ಬಹಳಷ್ಟು ಆಗಬೇಕಿದೆ. ಈ ನಿಟ್ಟಿನಲ್ಲಿ ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಮುಂದಾಗಬೇಕೆಂದು ಹೇಳಿದರು.

ಹನುಮೇಗೌಡ ಬೀರನಕಲ್ಲ ಮಾತನಾಡಿ, ಕನ್ನಡ ಸಂಘಟನೆಗಳಿಂದ ಜಿಲ್ಲೆಯಲ್ಲಿ ಉತ್ತಮ ಕೆಲಸಗಳು ಆಗುತ್ತಿವೆ. ನಾಡು, ನುಡಿಯ ಅಭಿವೃದ್ದಿಗಾಗಿ ಇನ್ನಷ್ಟು ಹೋರಾಟಗಳು ಮಾಡುವುದರ ಮೂಲಕ ಈ ಸಂಘಟನೆ ಯಶಸ್ಸನ್ನು ಕಾಣಲಿ ಎಂದು ಶುಭ ಹಾರೈಸಿದರು.

ರಾಷ್ಟ್ರಕವಿ ಕುವೆಂಪು ಜಯಂತೋತ್ಸವ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಲಕ್ಷ್ಮೀಕಾಂತ ಪಾಟೀಲ್ ಮದ್ರಿಕಿ, ಡಾ.ಶರಣು ಬಿ.ಗದ್ದುಗೆ, ಹಣಮಂತ ಹೊಸಮನಿ, ಶಿವಕುಮಾರ ಸುಣಗಾರ್, ಡಾ.ಎಸ್.ಎಸ್.ನಾಯಕ್, ಅಮೀನ್ ಹೊಸೂರ್, ಮಾರೆಮ್ಮ ಅಗಸರ್, ವಿನಯ್ ಎಂ.ಜಿ., ರವಿ ಆರ್.ಸೈನಿಕ, ಸಚಿನ ಕುಮಾರ ನಾಯಕ, ಡಾ.ರಿಜ್ವಾನ್ ಆಪ್ರೀಮ್, ಎಂ.ಡಿ ಮುಕ್ರಂ ಇನಾಮದಾರ್ ಅವರಿಗೆ "ಕುವೆಂಪು ಪ್ರಶಸ್ತಿ" ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಬಿ.ಎನ್.ವಿಶ್ವನಾಥ ನಾಯಕ, ಬೆಂಗಳೂರಿನ ಯೋಗಗುರು ವೈದ್ಯ ಚನ್ನಬಸವಣ್ಣಗೂರುಜಿ, ರಾಜ್ಯ ಕಾರ್ಯದರ್ಶಿ ವಿಜಯಕುಮಾರ ಮಗ್ದಂಪುರ, ಬಸ್ಸು ಗೌಡ ಬಿಳಾರ್, ಮಹಾರಾಜ್ ದಿಗ್ಗಿ, ಡಾ.ವಿರೇಶ ಜಾಕಾ, ನಗರಸಭೆ ಸದಸ್ಯರಾದ ಗಣೇಶ ದುಪ್ಪಲ್ಲಿ, ಡಾ.ಶರಣು ಗದ್ದುಗೆ, ಉದ್ಯಮಿ ಮಹೇಶ ಆವಂಟಿ, ನಗರಸಭೆ ಮಾಜಿ ಉಪಾಧ್ಯಕ್ಷರಾದ ಪ್ರಭಾವತಿ ಮಾರುತಿ ಕಲಾಲ, ವಿಜಯಕುಮಾರ ಕಡೆಚೂರ್, ಡಿಡಿಯು ಶಿಕ್ಣಣ ಸಂಸ್ಥೆಯ ಮಲ್ಲಿಕಾರ್ಜುನ ಮೇಟಿ, ಪಿಎಸ್ ಐ ಮಂಜನಗೌಡ, ಹಣಮಂತ ಬಂಕಲಗಿ, ಮಹೆಬೂಬ ಅಲಿ, ಜನಪದ ಸಂಗೀತಗಾರರಾದ ಮಾಳು ನಿಪನಾಳ ಬೆಳಗಾಂವಿ, ಮೋನಮ್ಮ ರಾಯಚೂರ, ನಹರಸಭೆ ಉಪಾಧ್ಯಕ್ಷರಾದ ರುಕೀಯಾ ಬೆಮಗಂ, ಜೀ ಕನ್ನಡ ಖ್ಯಾತ್ರೀಯ ಹುಲಿ ಕಾರ್ತಿಕಾ, ಪ್ರವೀಣ ಹಾಗೂ ದೀಪೀಕಾ, ಚಲನಚಿತ್ರ ನಟ ಆರ್. ಡಿ ಬಾಬು, ರಾಜಕುಮಾರ ಸಾಹುಕಾರ, ಶಿವರಾಜ್ ಗುತ್ತೇದಾರ್, ಈಶಪ್ಪ ಕಪ್ಪನೋರ್, ಮಾರುತಿ ಮುದ್ನಾಳ್, ದಶರಥ ಶೆಟ್ಟಿಕರ್, ಬಸ್ಸು ಮುಂಡರಗಿ, ನವಾಜ್ ಖಾದರಿ, ಭೀಮು ಪೂಜಾರಿ, ನಾಗರಾಜ ಸಾಹುಕಾರ್, ಅಶೋಕ ರೆಡ್ಡಿ ಯಲ್ಹೇರಿ, ಮಲ್ಲಿಕಾರ್ಜುನ ಹತ್ತಿಕುಣಿ, ರಂಗನಾಥ ನಾಯಕ, ಜೆ ಬಂಗಾರು ರಾಠೋಡ, ನಾಗರಾಜ ರಾಮಸಮುದ್ರ, ನಾಗಪ್ಪ ಹೊನಗೇರಿ, ರೋಹಿತ ಗಣಪೂರ್, ಬಸ್ಸುರಾಜ ಮಡಿವಾಳ ನಾಗೇಶ ಗದ್ದುಗೆ , ಶರಣಪ್ಪ ಹೊನಗೇರಾ, ಸೇರಿದಂತೆ ಮತ್ತಿತರರು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News