ಯಾದಗಿರಿ | ಮಹಾರ್ ಸೈನಿಕರ ಧೈರ್ಯ, ಹೋರಾಟ ಮೆಚ್ಚುವಂತದ್ದು : ಕುಪೇಂದ್ರ ವಠಾರ್

Update: 2025-01-01 12:44 GMT

ಯಾದಗಿರಿ: ಎಸ್‌ಸಿ, ಎಸ್‌ಟಿ ಹಿಂದುಳಿದ ಮತ್ತು ಶೋಷಿತರ ಶೌರ್ಯದ ಸಂಕೇತವೇ ಭೀಮಾ ಕೋರೆಗಾಂವ್ ಯುದ್ಧದ ಸ್ಮಾರಕ ಜಯಸ್ತಂಭ ಎಂದು ಯಾದಗಿರಿ ಪೋಸ್ಟ್ ಮಾಸ್ಟರ್ ಹೆಚ್.ಓ ಕುಪೇಂದ್ರ ವಠಾರ್ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಆಯೋಜಿಸಲಾಗಿದ್ದ ಭೀಮಾ ಕೋರೆಗಾಂವ್ ಯುದ್ಧ ಸ್ಮಾರಕ ಜಯಸ್ತಂಭಕ್ಕೆ ಗೌರವ ಸಲ್ಲಿಸಿ ಮಾತಾನಾಡಿದ ಅವರು. ‘30 ಸಾವಿರ ಪೇಶ್ವೆಗಳನ್ನು 500 ಮಹಾರ್ ಸೈನಿಕರು ಸೋಲಿಸಿ ವಿಜಯಪತಾಕೆ ಹಾರಿಸಿದ ದಿನವನ್ನು ಕೋರೆಗಾಂವ್ ವಿಜಯೋತ್ಸವವಾಗಿ ದೇಶಾದ್ಯಂತ ಆಚರಣೆ ಮಾಡಲಾಗುತ್ತಿದೆ. ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪೃಶ್ಯತೆ, ಮೇಲುಕೀಳುಗಳ ವಿರುದ್ಧ ನಿಂತು ಮಾನವೀಯ ವೌಲ್ಯಗಳನ್ನು ಪಡೆದುಕೊಳ್ಳಲು ಹಂಬಲಿಸುವ ಮಹಾರ್ ಸೈನಿಕರ ಧೈರ್ಯ ಸಾಹಸ, ಕೆಚ್ಚೆದೆಯ ಹೋರಾಟವಾಗಿದೆ ಎಂದರು.

ಮಹರ್ ಜನಾಂಗದ ಮಕ್ಕಳಿಗೆ ಶಿಕ್ಷಣ ಮೂಲಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದರೂ ನಿರ್ಲಕ್ಷ್ಯ ತೋರಿದ್ದರಿಂದ ಇಂಗ್ಲಿಷ್ ಆಡಳಿತ ಮಹರ್ ಸೇರಿ ಶೋಷಿತರ ಪರವಾಗಿ ಶಿಕ್ಷಣ ಮೂಲಸೌಕರ್ಯ ಕಲ್ಪಿಸಿ ಸೇನೆಯಲ್ಲಿ ಅವಕಾಶ ಕಲ್ಪಿಸಿ ಸ್ವಾಭಿಮಾನ ಮತ್ತು ಶೌರ್ಯ ಕಲ್ಪಿಸಲು ಒಪ್ಪಿದ್ದರಿಂದ ಭೀಮಾ ನದಿ ದಡದಲ್ಲಿ ಪೇಶ್ವೆಯವರ ಸೇನೆ ಹಾಗೂ ಇಂಗ್ಲೀಷ್ ಸೈನಿಕರ ಮಧ್ಯೆ ನಡೆದ ಯುದ್ದದಲ್ಲಿ 24 ಗಂಟೆಯಲ್ಲಿ 30 ಸಾವಿರ ಪೇಶ್ವೆಗಳ ಸೈನಿಕರನ್ನು ಐನೂರು ಮಹರ್ ಸೈನಿಕರು ಸೋಲಿಸಿ ಶೌರ್ಯ ಮೆರೆದಿದ್ದಾರೆ.

ಅವರ ನೆನಪಿಗಾಗಿ ಭೀಮಾನದಿಯ ತೀರದಲ್ಲಿ ವಿಜಯಸ್ಥಂಭ ಸ್ಥಾಪಿಸಲಾಗಿದ್ದು, ಪ್ರತಿವರ್ಷ ಕೋರೆಗಾಂವ್ಗೆ ಜ.1ರಂದು ಸುಮಾರು ಲಕ್ಷಾಂತರ ಜನರು ಸೇರಿ ಕೋರೆಗಾಂವ್ ವಿಜಯೋತ್ಸವ ಆಚರಣೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಹೇಶ್ ಕುರಕುಂಬಳಕರ್ ವಕೀಲರು, ಸಾಬಣ್ಣ ಸುಂಗಲಕರ್, ಶ್ರೀಮಂತ ಚಿನ್ನಾಕರ್, ಶ್ರೀಕಾಂತ ಸುಂಗಲಕರ್, ದೊಡ್ಡ ಹುಲಗಪ್ಪ ಒಡೆಯರ್, ರಾಮಲಿಂಗಪ್ಪ ಬೆಳಗುಂದಿ, ಶರಣಪ್ಪ ಕೋಲೂರಕರ, ಭೀಮರಾಯ ಕುರುಕುಂಬಳ, ಗುರು ಸಂಗುಲಕರ್, ಮರಲಿಂಗಪ್ಪ್ ಕೋಲೂರಕರ, ಸಿದ್ದಪ್ಪ ಯಡ್ಡಳಿ, ರಮೇಶ್ ಟೋಕಪೂರ್, ಮಲಪ್ಪ ಮೇಳಿಕೇರಿ, ಶರಬಣ್ಣ ಮೇಸ್ತ್ರಿ ತಳಕ, ಮಂಜುನಾಥ್ ಮಂಜುಲಕರ್, ಬಸವರಾಜ್ ದೇವತ್ಕಲ್, ಶ್ರೀನಾಥ್ ಚಲವಾದಿ, ಹರಿಶ್ಚಂದ್ರ ಜೇವರ್ಗಿ, ಭೀಮರೆಡ್ಡಿ ಚಲುವಾದಿ, ಪಾಂಡು ವಾಡಿ, ಬಾಗಪ್ಪ ಕೋಲೂರಕರ, ಬಾಗು ಹೊಸಳ್ಳಿ. ಸೇರಿದಂತೆ ಅನೇಕರು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News