ಯಾದಗಿರಿ | ರೈತರ ಏಳಿಗೆಗೆ ಶ್ರಮ ವಹಿಸಿದ ಶಿವಲಿಂಗಪ್ಪ ವೆಂಕಟಗಿರಿ ಸೇವೆ ಅಮೋಘ : ಬಾಪುಗೌಡ
ಯಾದಗಿರಿ : ಕಳೆದ 10 ವರ್ಷಗಳಿಂದ ಸುರಪುರ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಾಗಿ ಕೆಲಸ ಮಾಡಿ ಸುರಪುರ ಮತ್ತು ಹುಣಸಗಿ ತಾಲ್ಲೂಕಿನ ರೈತರ ಏಳಿಗೆಗೆ ಸೇವೆ ಮಾಡುತ್ತಿರುವ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಶಿವಲಿಂಗಪ್ಪ ವೆಂಕಟಗಿರಿ ಸೇವೆ ಅಮೋಘವಾಗಿದೆ ಎಂದು ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ್ ಹುಣಸಗಿ ತಿಳಿಸಿದ್ದಾರೆ.
ಕಲುಬುರಗಿ-ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಶಿವಲಿಂಗಪ್ಪ ವೆಂಕಟಗಿರಿ ಅವರಿಗೆ ನಗರದ ಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿವಲಿಂಗಪ್ಪ ನಮ್ಮ ಸುರಪುರ ಶಾಖೆಯಲ್ಲಿ ಮೇಲ್ವಿಚಾರಕರಾಗಿ, ವ್ಯವಸ್ಥಾಪಕರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಅವರು ಇಲಾಖೆಯ ನೌಕರರ ಅಭಿವೃಧ್ಧಿಗಾಗಿ ಸೇವೆ ಮಾಡುತ್ತಾರೆ ಎನ್ನುವ ಭರವಸೆಯಲ್ಲಿ ಅವರನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆಗೊಳಿಸಿರುವುದು ನಮ್ಮ ಸುರಪುರ ಶಾಖೆಗೂ ದೊಡ್ಡ ಹೆಸರು ತಂದಿದೆ, ಮುಂದೆಯೂ ಅವರು ಅವರು ಇನ್ನಷ್ಟು ಉತ್ತಮವಾಗಿ ಸೇವೆ ನೀಡಲಿ ಎಂದು ಹಾರೈಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿವಿಧ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳು ಶಿವಲಿಂಗಪ್ಪ ವೆಂಕಟಗಿರಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ವೆಂಕಟೇಶ ಬೇಟೆಗಾರ, ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ ದೊರೆ ಆಲ್ದಾಳ, ಬ್ಯಾಂಕ್ ಮೇಲ್ವಿಚಾರಕ ಬಸವರಾಜ ಕುಂಬಾರ ಕರಡಕಲ್, ಕೃ.ಪ.ಸ.ಸಂ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಬಸವರಾಜ ದೋರನಹಳ್ಳಿ, ರೈತ ಹೋರಾಟಗಾರ ಬಸನಗೌಡ ಹೆಮ್ಮಡಗಿ ವೇದಿಕೆಯಲ್ಲಿದ್ದರು, ವಸಂತ ಕುಲಕರ್ಣಿ ಕಾಮನಟಗಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ವಂದಿಸಿದರು.
ಟಿಎಪಿಸಿಎಮ್ಎಸ್ ಕಾರ್ಯದರ್ಶಿ ಶಿವರುದ್ರ ಉಳ್ಳಿ ಸೇರಿದಂತೆ ತಾಲ್ಲೂಕು ಎಲ್ಲಾ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳು ಹಾಗೂ ಶಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.