ಯಾದಗಿರಿ | ದೇವಾಪುರ ಕ್ರೀಡಾಪಟುಗಳಿಗೆ ಚಿನ್ನದ ಪದಕ : ಚಾಂಪಿಯನ್ ಟ್ರೋಫಿ

Update: 2024-12-31 14:45 GMT

ಯಾದಗಿರಿ : ಅಖಿಲ ಭಾರತ ವನವಾಸಿ ಕಲ್ಯಾಣ ಸಂಸ್ಥೆ ಸಂಸ್ಥೆ ಛತ್ತೀಸಗಡದ ರಾಯಪೂರದಲ್ಲಿ ಹಮ್ಮಿಕೊಂಡಿದ್ದ 24ನೇ ರಾಷ್ಟ್ರ ಮಟ್ಟದ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಸುರಪುರ ತಾಲ್ಲೂಕಿನ ದೇವಾಪುರ ಗ್ರಾಮದ ಏಕಲವ್ಯ ಬಿಲ್ಲುಗಾರಿಕೆ ತಂಡದ ಕ್ರೀಡಾಪಟುಗಳು ಚಿನ್ನದ ಪದಕದೊಂದಿಗೆ ಚಾಂಪಿಯನ್ ಟ್ರೋಫಿ ತಮ್ಮದಾಗಿಸಿಕೊಂಡು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.

ಕ್ರೀಡಾಪೂಟದಲ್ಲಿ ಭಾಗವಹಿಸಿದ್ದ ದೇವಾಪುರ ಗ್ರಾಮದ ಭಾಗ್ಯಶ್ರೀ ಗೆ 3 ಚಿನ್ನದ ಪದಕ, ಅನ್ನರ್ಪೂಣಗೆ 2 ಬೆಳ್ಳಿ ಪದಕ, ಕಾರವಾರದ ಯುಕ್ತ ಸತೀಶಗೌಡಗೆ ಬೆಳ್ಳಿ ಪದಕ ಸೇರಿ ಒಟ್ಟು 6 ಪದಕಗಳು ಕರ್ನಾಟಕದ ತಂಡಕ್ಕೆ ಲಭಿಸಿವೆ. ಅಲ್ಲದೆ ಗೆಲುವು ಸಾಧಿಸಿ ಚಾಂಪಿಯನ್ ಟ್ರೋಪಿ ತಮ್ಮದಾಗಿಸಿಕೊಂಡರು. ಅಲ್ಲದೆ ಬಾಲಕರ ವಿಭಾಗದಲ್ಲಿ ದೇವಾಪುರದ ಬಲಭೀಮ 5ನೇ ಸ್ಥಾನ, ದೇವರಾಜ 6ನೇ ಸ್ಥಾನ ಹಾಗೂ ಮೌನೇಶ ಮತ್ತು ನವೀನಕುಮಾರ ಕ್ರಮವಾಗಿ ಸ್ಥಾನ ಪಡೆದುಕೊಂಡರು.

ಈ ಕ್ರೀಡಾಕೂಟದಲ್ಲಿ ದೇಶದ 28 ರಾಜ್ಯಗಳಿಂದ 600 ಜನ ಕ್ರೀಟಾಪಡುಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್ ನಿಂದಲೂ ಸುಮಾರು 20 ಜನ ಕ್ರೀಡಾಪಟುಗಳು ಭಾಗವಹಿಸಿದ್ದರು.

ಇಂತಹ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿ ಚಾಂಪಿಯನ್ ಟ್ರೋಪಿ ತಮ್ಮದಾಗಿಸಿಕೊಂಡ ತಂಡದ ಸಾಧನೆಗೆ ವನವಾಸಿ ಕಲ್ಯಾಣ ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಾಗೂ ತಂಡದ ತರಬೇತುದಾರ ಮೌನೇಶ ಕುಮಾರ, ಕಾರವಾರ ಜಿಲ್ಲೆ ತರಬೇತುದಾರ ಅಮಿತ್ ಗೌಡ ಹಾಗೂ ದೇವಾಪುರ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News