ಯಾದಗಿರಿ | ಅಮಿತ್ ಶಾ ಅವರನ್ನು ಕೆಂದ್ರ ಸಚಿವ ಸಂಪುಟದಿಂದ ವಜಾ ಮಾಡಿ : ನಾಗರತ್ನ ಪಾಟೀಲ್ ಆಗ್ರಹ

Update: 2024-12-31 12:02 GMT

ವಡಗೇರ : ತಾಲ್ಲೂಕಿನ ರೈತ ಸಂಘ ಹಾಗೂ ದಲಿತ ಪರ ಒಕ್ಕೂಟ ಸಂಘದಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಮಾತನಾಡಿದ ಕೆಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೂಡಲೇ ಕೆಂದ್ರ ಸಚಿವ ಸಂಪುಟದಿಂದ ವಜಾಗೊಳಿಸಿ ಈ ದೇಶದಿಂದ ಗಡಿಪಾರು ಮಾಡಬೇಕು ಎಂದು ವಡಗೇರ ತಹಶೀಲ್ದಾರ್ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಮಹಿಳಾ ಘಟಕ ರಾಜ್ಯಾಧ್ಯಕ್ಷರಾದ ನಾಗರತ್ನ ವಿ.ಪಾಟೀಲ್, ಅಮಿತ್ ಶಾ ಅವರು ಡಾ.ಅಂಬೇಡ್ಕರ್ ಬಗ್ಗೆ ಗೌರವ ಇಲ್ಲದೆ ಅಗೌರವದಿಂದ ಮಾತನಾಡಿದ್ದಾರೆ ಕೂಡಲೇ ಅವರು ಕೆಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು, ಈ ದೇಶದ ಜನರ ಕ್ಷಮೆ ಕೇಳಬೇಕು. ಈ ದೇಶದ ಎಲ್ಲ ನಾಗರಿಕರಿಗೆ ಬದುಕು ಕಟ್ಟಿಕೊಳ್ಳಲು ಅವಕಾಶ ಮತ್ತು ಹಕ್ಕುಗಳು ಕೊಟ್ಟಿದ್ದು ಅಂಬೇಡ್ಕರ್ ನಾವೆಲ್ಲರೂ ಪ್ರತಿ ದಿನ ಅಂಬೇಡ್ಕರ್ ಅವರನ್ನು ಸ್ಮರಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಸಾಹಿತಿ ಸಿದ್ದಣ್ಣ ಪೂಜಾರಿ, ಡಾ.ಗಾಳೆಪ ಪೂಜಾರಿ, ರಂಗನಾಥ ಬಾಗ್ಲಿ, ನಿಂಗಣ್ಣ ಕರಡಿ, ಮಲ್ಲಣ್ಣ ನೀಲಹಳ್ಳಿ, ಶರಣು ವಡಗೇರ, ಸಿದ್ದಣ್ಣ ಹುಬ್ಬಳ್ಳಿ, ಬಾಲಪ್ಪ ಪೂಜಾರಿ, ದಲಿತ ಹಾಗೂ ರೈತ ಪರ ಹೋರಾಟಗಾರರು ಮಹಿಳೆಯರು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News