ಯಾದಗಿರಿ | ಡಾ.ವೀರಬಸವಂತರಡ್ಡಿ ಬಡರೋಗಿಗಳ ಪಾಲಿನ ಸಂಜೀವಿನಿ : ರಾಚಣ್ಣ ಗೌಡ
ಯಾದಗಿರಿ : ಮಾಜಿ ಶಾಸಕ ದಿ.ಡಾ.ವೀರಬಸವರೆಡ್ಡಿ ಮುದ್ನಾಳ ಅವರು ಬಡ ರೋಗಿಗಳ ಪಾಲಿನ ಸಂಜೀವಿನಿಯಾಗಿದ್ದರು, ಎಂತಹದ್ದೇ ಕಠಿಣ ಪರಸ್ಥಿತಿಯಲ್ಲೂ ರೋಗಿಗಳನ್ನು ಗುಣಮುಖ ಮಾಡುವ ಸಾಮರ್ಥ್ಯ ಹೊಂದಿದ್ದರೆಂದು ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ್ ಹೇಳಿದರು.
ಕೊಲಿವಾಡ ಏರಿಯಾದಲ್ಲಿ ಬರುವ ನೆಹರು ಪ್ರಾಥಮಿಕ ಶಾಲೆಯಲ್ಲಿ ವೈದ್ಯರಾಗಿದ್ದ ಹಾಗೂ ಯಾದಗಿರಿ ಮತಕ್ಷೇತ್ರದ ಮಾಜಿ ಶಾಸಕರೂ ಆಗಿದ್ದ ದಿ.ವೀರಬಸವಂತರಡ್ಡಿ ಮುದ್ನಾಳ್ ಅವರ 73ನೇ ಹುಟ್ಟು ಹಬ್ಬದ ನಿಮಿತ್ಯ ಅಂಗನವಾಡಿ ಶಾಲೆ ಮಕ್ಕಳಿಗೆ ಸಮವಸ್ತ್ರ ಹಾಗೂ ನೆಹರು ಪ್ರಾಥಮಿಕ ಶಾಲೆ ಮಕ್ಕಳಿಗೆ ನೋಟ ಬುಕ್ ಮತ್ತು ಪೆನ್ನು ವಿತರಣೆ ಮಾಡಿ ಮಾತನಾಡಿದರು.
ಡಾ.ವೀರಬಸವಂತರಡ್ಡಿ ಅವರಿಗೆ ಮಕ್ಕಳಿಲ್ಲ ಎಂಬ ಕೊರಗು ಇಲ್ಲದಷ್ಟು ಸಮೀಪವರ್ತಿಯಾಗಿ ಅವರ ನೆರಳಿನಂತೆಯೇ ಇದ್ದ ಕಲಾಲ್ ಇಂದು ಕೂಡಾ ಅವರ ಜನುಮ ದಿನವನ್ನು ಮಕ್ಕಳಿಗೆ ನೆರವು ನೀಡುವ ಮೂಲಕ ಆಚರಿಸಿ ಮತ್ತಷ್ಟು ಉತ್ತಮ ಕೆಲಸ ಮಾಡಿದ್ದಾರೆಂದು ಹೇಳಿದರು.
ಈ ಸಂದರ್ಭದಲ್ಲಿ ಚನ್ನಕೇಶವ ಬಾಣತಿಹಾಳ, ಸಿಡಿಪಿಓ ವನಾಜಾಕ್ಷೀಜಿ, ಪ್ರಭಾವತಿ ಮಾರುತಿ ಕಲಾಲ್, ನಗರಸಭೆ ಸದಸ್ಯರಾದ ಮಾದೇವಮ್ಮ ಬೀರನೂರ, ಶರಣಪ್ಪ ಪಡಿ ಶೆಟ್ಟಿ, ನಾಗಪ್ಪ ಬೆನಕಲ್, ವಿಶ್ವನಾಥ್ ಚಿಂತನಹಳ್ಳಿ, ಮಾದೇವಪ್ಪ ಗಣಪುರ, ಯಂಕಪ್ಪ ಗೊಸಿ, ಮಾದೇವಪ್ಪ ಪಾಮಳ್ಳಿ, ನಾಗರಾಜ ಬಿರನೂರ್, ನಿಂಗಪ್ಪ ಕೂಡ್ಲೂರು, ಕಾಶಿನಾಥ್ ಮುಸ್ತೂರ್, ಶ್ರೀಧರ್ ರೈಚೂರಕರ್, ಸಾಬಣ್ಣ ಬಾವುರ್, ಮಲ್ಲಯ್ಯ ಬಾವುರ್, ರಮೇಶ್ ದೊಡ್ಮನಿ, ಲಕ್ಷ್ಮಿಕಾಂತ್ ಬಾವುರ್, ಮಲ್ಲಯ್ಯ ಪೂಜಾರಿ, ರಂಗನಾಥ್ ರೆಡ್ಡಿ, ಮಾದೇವಪ್ಪ ಅಂಬಿಗೇರ್, ಮಲ್ಲಯ್ಯ ಜಲಾಲ್, ಮಹೇಶ್ ಕೋರಿ, ಅಂಬರೀಶ್ ಹುಬ್ಬಳ್ಳಿ, ಹನುಮಂತ್ ರಾಯ ಬಾಗುರ್, ಮಂಜುನಾಥ್ ಮುಷ್ಟೂರ್ , ಶಿವರಾಜ್ ನದಿ, ಜಂತಿ ಸಾಗರ್, ಸಾಬಣ್ಣ ಅಂಬಿಗೇರ್, ನರಸಪ್ಪ ಬಂಗಿ, ಹನುಮಂತ ಚಾಪಲ್, ರಮೇಶ್ ದೊಡ್ಮನಿ, ಅಂಗನವಾಡಿ ಶಿಕ್ಷಕಿ ಮರಳಮ್ಮ ಸೇರಿದಂತೆ ಶಾಲಾ ಸಿಬ್ಬಂದಿ ಮಕ್ಕಳು ಉಪಸ್ಥಿತರಿದ್ದರು.