ಯಾದಗಿರಿ | ದೇಶಕ್ಕೆ ಅಂಬೇಡ್ಕರ್ ಕೊಡುಗೆ ಅಪಾರ : ರಾಮಣ್ಣ ಕಲ್ಲದೇವನಹಳ್ಳಿ
ಯಾದಗಿರಿ : ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಬರೆದಿರುವ ಸಂವಿಧಾನ ಶ್ರೇಷ್ಠ ಸಂವಿಧಾನ. ಈ ದೇಶದ ಎಲ್ಲಾ ಪ್ರಜೆಗಳಿಗೆ ಸಂವಿಧಾನವೇ ಪವಿತ್ರ ಗ್ರಂಥವಾಗಿದೆ ಎಂದು ರಾಜ್ಯ ಸಂಘಟನೆ ಸಂಚಾಲಕ ರಾಮಣ್ಣ ಕಲ್ಲದೇವನಹಳ್ಳಿ ಹೇಳಿದ್ದಾರೆ.
ಹುಣಸಗಿ ತಾಲ್ಲೂಕಿನ ಕಲ್ಲದೇವನಹಳ್ಳಿ ಗ್ರಾಮದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ಮಾಣ ದಿನ ಕಾರ್ಯಕ್ರಮ ಉದ್ದೇಶಿಸಿ ಮಾತಾನಾಡಿ ಅವರು, ಡಾ.ಬಾಬಾಸಾಹೇಬ್ ಅವರಕೊಡುಗೆಯಾಗಿ ನಮಗೆ ಸಂವಿಧಾನ ಸಿಕ್ಕಿದೆ. ಪ್ರಜೆಗಳಾದ ನಾವು ಸಂವಿಧಾನವನ್ನು ಗೌರವಿಸಬೇಕು. ದೇಶದ ಎಲ್ಲಾ ಧರ್ಮ, ಜಾತಿ ಜನರಿಗೆ ಸಂವಿಧಾನ ಸಮಾನ ಹಕ್ಕು ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ಜುಮ್ಮಾಣ್ಣ ಹೆಬ್ಬಾಳ, ಪಾರುತ್ತಯ್ಯ ಗಣಾಚಾರಿ, ಪರಮಾನಂದ ಚಟ್ಟಿ, ಶಿವಣ್ಣ ಬಡಿಗೇರ್, ಕಾಳಪ್ಪಾ ಅಗ್ನಿ, ಮಾನಪ್ಪ ಬಡಿಗೇರ, ಯಲ್ಲಪ್ಪ ಇಸ್ಲಾಂಪೂರ, ಈರಪ್ಪ ಬಡಿಗೇರ, ಭಿಮಾರಾಯ ತಳವಾರ, ಸುರೇಶ್ ಅಗ್ನಿ, ಶರಣಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಗ್ರಾಮದ ಮುಖಂಡರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.