ಯಾದಗಿರಿ | ಭೀಮವಾದ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ನೇಮಕ
ಯಾದಗಿರಿ : ದಲಿತರಿಗೆ ಸಾಂವಿಧಾನಿಕವಾಗಿ ಸರಕಾರಗಳು ನೀಡಬೇಕಾದ ಸೌಲಭ್ಯಗಳನ್ನು ಕೊಡಿಸಲು ಎಲ್ಲರೂ ಹೋರಾಟ ಮಾಡೋಣ ಎಂದು ಭೀಮವಾದ ದಲಿತ ಸಂಘರ್ಷ ಸಮಿತಿ ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಸಂಜೀವ ಹ.ಕಾಂಬಳೆ ಹೇಳಿದ್ದಾರೆ.
ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಸಂಘಟನೆಯ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಪದಾಧಿಕಾರಿಗಳ ನೇಮಕಕ್ಕೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶದಲ್ಲಿ ದಲಿತರ ಮೇಲೆ ನಿತ್ಯವು ಹಲ್ಲೆ ಅತ್ಯಾಚಾರಗಳು ನಡೆಯುತ್ತಿವೆ, ಜಾತಿ ಪದ್ಧತಿ ಇನ್ನೂ ಜೀವಂತವಾಗಿದೆ, ನಮ್ಮಲ್ಲಿನ ಒಗ್ಗಟ್ಟು ಹಾಗೂ ಹೋರಾಟ ದಿಂದ ಜಾತಿ ಪದ್ಧತಿ ದೂರಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಹಿರಿಯ ಹೋರಾಟಗಾರ ವೆಂಕೋಬ ದೊರೆ ಬೊಮ್ಮನಹಳ್ಳಿ, ಮುಖಂಡರಾದ ಮಲ್ಲಣ್ಣ ಸಾಹುಕಾರ,ಈರಣ್ಣ ಕಸನ್,ಶಾಮರಾವ್ ಹೇರೂರ,ಯಮನಪ್ಪ ಅಳ್ಳೂರು,ದೊಡ್ಡ ಭೀಮರಾಯಗೌಡ ಪೊಲೀಸ್ ಪಾಟೀಲ್,ಖಾದರ ಬಾಷಾ,ಹಣಮಂತ ಸತ್ಯಂಪೇಟೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ನಂತರ ಸಂಘಟನೆಯ ಜಿಲ್ಲಾ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.
ಜಿಲ್ಲಾ ಪದಾಧಿಕಾರಿಗಳು :
ಶಿವಶಂಕರ ಹೆಚ್.ಹೊಸಮನಿ (ಜಿಲ್ಲಾ ಸಂಚಾಲಕ), ಮಲ್ಲಪ್ಪ ಲಂಡನಕರ್, ಹಣಮಂತ್ರಾಯ ಬಿಜಾಸಪುರ, ಪರಶುರಾಮ ಹೈಯ್ಯಾಳಕರ್, ಮೌನೇಶ ಬೀರನೂರ, ಸಿದ್ರಾಮ ನಾಯ್ಕಲ್, ಮಲ್ಲಿಕಾರ್ಜುನ ತಳವಾರಗೇರಾ ( ಜಿಲ್ಲಾ ಸಂಘಟನಾ ಸಂಚಾಲಕರು), ಹಣಮಂತ ತೇಲ್ಕರ್ (ಖಜಾಂಚಿ), ತಾಲ್ಲೂಕು ಘಟಕ ಪದಾಧಿಕಾರಿಗಳು, ಮಲ್ಲಿಕಾರ್ಜುನ ಜಾಲಿಬೆಂಚಿ (ಸಂಚಾಲಕರು), ಬಸವರಾಜ ಬಡಿಗೇರ, ಪರಶು ಕನ್ನೆಳ್ಳಿ, ಮಲ್ಲಪ್ಪ ದೊಡ್ಮನಿ ತಳವಾರಗೇರ, ರತ್ನಪ್ಪ ಸುರಪುರ, ದೇವರಾಜ ಕರಡಕಲ್ (ಸಂಘಟನಾ ಸಂಚಾಲಕರು), ಸಂಗಣ್ಣ ಬೆಕ್ಕಿನಾಳ (ಖಜಾಂಚಿ), ಸುರಪುರ ನಗರ ಘಟಕ ಪದಾಧಿಕಾರಿಗಳು ವಿಜಯಕುಮಾರ ಸುರಪುರ (ಸಂಚಾಲಕರು), ನಾಗರಾಜ ಹೊಸಮನಿ (ಸಂಘಟನಾ ಸಂಚಾಲಕರು), ಹಣಮಂತಿ ಕಟ್ಟಿಮನಿ (ಖಜಾಂಚಿ)ಯನ್ನಾಗಿ ನೇಮಕಗೊಳಿಸಲಾಯಿತು.