ಯಾದಗಿರಿ | ಮಕ್ಕಳು ಕಡ್ಡಾಯವಾಗಿ ಅಲ್ಬೆಂಡಾಜೋಲ್ ಮಾತ್ರೆಗಳು ಸೇವಿಸಿ : ಡಾ.ಹಣಮಂತ ರೆಡ್ಡಿ
ಯಾದಗಿರಿ : ಕಡ್ಡಾಯವಾಗಿ ಅಲ್ಬೆಂಡಾಜೋಲ್ ಮಾತ್ರೆಗಳನ್ನು ಸೇವಿಸುವುದು, ಮಕ್ಕಳ ಆರೋಗ್ಯಕ್ಕೆ ಅತಿ ಅವಶ್ಯಕವಾಗಿರುತ್ತದೆ. ಶಾಲಾ, ಕಾಲೇಜು, ಅಂಗನವಾಡಿ ಶಿಕ್ಷಕರು ಜಂತುಹುಳು ಮಾತ್ರೆಯನ್ನು ಸೇವಿಸಲು ಮನವೋಲಿಸಿ ಗುರಿ ಸಾಧಿಸುವಂತೆ ಯಾದಗಿರಿ ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಹಣಮಂತ ರೆಡ್ಡಿ ಸಲಹೆ ನೀಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಹಯೋಗದಲ್ಲಿ ಇಲ್ಲಿನ ಸ್ಟೇಷನ್ ಬಜಾರ್ ಸರಕಾರಿ ಪ್ರೌಢ ಶಾಲೆ ಜಂತುಹುಳು ಸೋಂಕನ್ನು ತಡೆಗಟ್ಟುವ ಬಗ್ಗೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಂತುಹುಳು ನಿವಾರಣೆ ಸಲುವಾಗಿ ಸಮುದಾಯ ಹೋರಾಡಬೆಕಾಗಿದ್ದು, ಇದರ ಬಗ್ಗೆ ಎಲ್ಲಾರಿಗೂ ಅರಿವು ಮೂಡಿಸುವುದು ಅವಶ್ಯವಾಗಿದೆ. ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಕಾರ್ಯಕ್ರಮದ ನಿಮಿತ್ತ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಕಾರ್ಯಕ್ರಮ ಪ್ರತಿ ವರ್ಷದಲ್ಲಿ ಫೆಬ್ರವರಿ ಮತ್ತು ಆಗಸ್ಟ್ ಮಾಹೆಯಲ್ಲಿ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದರು.
ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಎಂ.ಜಯಾ ಅವರು ಮಾತಾನಾಡಿ, ಎಲ್ಲಾ ಮಕ್ಕಳು ಜಂತುಹುಳು ಸೊಂಕನ್ನು ತಡೆಗಟ್ಟಲು ಮಾತ್ರೆಗಳನ್ನು ತಪ್ಪದೆ ಸೇವಿಸಬೇಕು, ಆರೋಗ್ಯದ ಕಡೆಗೆ ಗಮನ ಹರಿಸುವಂತೆ ತಿಳಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ತುಳಸಿರಾಮ ಚವ್ಹಾಣ ನಿರೂಪಿಸಿದರು. ಕುಮಾರಿ ತಾಯಮ್ಮು ಪ್ರಾರ್ಥನೆಯನ್ನು ಹಾಡಿದರು. ಆಪ್ತ ಸಹಾಯಕಿ ಅಯ್ಯಮ್ಮ, ಜಿಲ್ಲಾ ಸಂಯೋಜಕರಾದ ರಾಣೋಜಿ ನೇರವೇರಿಸಿದರು. ಈ ಸಂದರ್ಭದಲ್ಲಿ ನ.ಪ್ರಾ.ಆ.ಕೇಂದ್ರದ ವೈದ್ಯರಾದ ಡಾ.ವಿನೂತಾ, ಅಮೃತಬಾಯಿ, ಯಾದಗಿರಿ ಜಿ.ಪಂ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಕನಕಪ್ಪ, ಜಿಲ್ಲಾ ಲೆಕ್ಕಪತ್ರ ವ್ಯವಸ್ಥಾಪಕರಾದ ಸಹನಾ, ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ, ಆಶಾ ಕಾರ್ಯ ಕರ್ತೆಯರು, ಶಾಲಾ ಶಿಕ್ಷಕರು, ಶಾಲಾ ಮಕ್ಕಳು ಉಪಸ್ಥಿತರಿದ್ದರು.